Kuvempu Biography, ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ Pdf, Kuvempu Jeevana Charitre Prabandha Essay On Kuvempu in Kannada Kuvempu Prabandha in Kannada Kuvempu Baduku Baraha Essay in Kannada
Kuvempu Prabandha in Kannada Essay
ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದಲ್ಲಿ 20ನೇ ಶತಮಾನದ ಕನ್ನಡ ಸಾಹಿತ್ಯದ ಅತ್ಯಂತ ಶ್ರೇಷ್ಠ ಕವಿ, ಕಾದಂಬರಿಕಾರ ಹಾಗೂ ಚಿಂತಕರಲ್ಲಿ ಒಬ್ಬರಾದ ರಾಷ್ಟ್ರಕವಿ ಕುವೆಂಪುರವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಒಂದು ಲೇಖನ ವಿದ್ಯಾರ್ಥಿಗಳಿಗೆ ಕುವೆಂಪುರವರ ಬಗ್ಗೆ ಪ್ರಬಂಧ ಬರೆಯುವಾಗ ಅಥವಾ ಭಾಷಣ ಮಾಡುವಾಗ ಸಹಾಯವಾಗಬಹುದು.
ಪೀಠಿಕೆ:
ಕನ್ನಡ ಸಾಹಿತ್ಯದಲ್ಲಿ ಅಜರಾಮರ ಸ್ಥಾನವನ್ನು ಪಡೆದಿರುವ ಕುವೆಂಪುರವರ ಪೂರ್ಣ ಹೆಸರು ‘ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ‘. ಆದರೆ, ಕುವೆಂಪು ಎಂದೇ ಪ್ರಸಿದ್ಧರಾದ ಇವರು ಇಪ್ಪತ್ತನೇ ಶತಮಾನದ ಸಾಹಿತ್ಯ ಕಂಡ ಪ್ರತಿಭಾನ್ವಿತ ಕವಿ, ಕಾದಂಬರಿಕಾರ, ಚಿಂತಕ ಹಾಗೂ ಮಹಾನ್ ನಾಟಕಕಾರ. ಅಲ್ಲದೆ, “ಜ್ಞಾನಪೀಠ ಪ್ರಶಸ್ತಿ” ಪಡೆದ ಕನ್ನಡದ ಮೊದಲ ಸಾಹಿತಿ ಎಂಬ ಹೆಗ್ಗಳಿಕೆ ಕುವೆಂಪುರವರಿಗೆ ಸಲ್ಲುತ್ತದೆ.
ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎಂದು ಗೌರವಿಸಲ್ಪಟ್ಟ ಕುವೆಂಪುರವರು ತಮ್ಮ ಸಾಹಿತ್ಯದ ಮೂಲಕ ಸಮಾಜ, ಕಾಲ, ಮಾನವತೆಯನ್ನು ಒಂದೇ ಸೂತ್ರದಲ್ಲಿ ಬೆಸೆಯುವ ಅಪರೂಪದ ಕವಿಯಾಗಿದ್ದಾರೆ.
ಕುವೆಂಪುರವರು ತಮ್ಮ ವಿಶಿಷ್ಟ ಚಿಂತನೆ, ಮಾನವತಾವಾದ ಹಾಗೂ ಸಾಹಿತ್ಯಿಕ ಸಾಧನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ರಾಮಾಯಣವನ್ನು ಆಧರಿಸಿದ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಹಾಗೂ ‘ಕಾನೂರು ಹೆಗ್ಗಡತಿ’ ಯಂತಹ ಕಾದಂಬರಿಗಳು ಅತ್ಯಂತ ಪ್ರಸಿದ್ಧ ಹಾಗೂ ಶ್ರೇಷ್ಠ ಕೃತಿಗಳಾಗಿವೆ. ಅಲ್ಲದೆ, ತಮ್ಮ ಅಮೂಲ್ಯ ಸಾಹಿತ್ಯ ಸೇವೆಗೆ ಗೌರವಗಾಗಿ ಜ್ಞಾನಪೀಠ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಹಾಗೂ ಇನ್ನು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ವಿಷಯ ವಿವರಣೆ: ( Kuvempu Prabandha in Kannada )
ಬಾಲ್ಯ ಮತ್ತು ಶಿಕ್ಷಣ:
ರಾಷ್ಟ್ರಕವಿ ಕುವೆಂಪುರವರು 29 ಡಿಸೆಂಬರ್ 1904 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ಕುವೆಂಪುರವರ ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಬಾಲ್ಯದಲ್ಲೇ ಮಲೆನಾಡಿನ ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿ ಬೆಳೆದ ಕುವೆಂಪುರವರು ಪರಿಸರದ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದರು.
ಕುವೆಂಪುರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪೂರ್ಣಗೊಳಿಸಿ, ಪ್ರೌಢಶಿಕ್ಷಣದಿಂದ ಹಿಡಿದು ಎಂಎ ಪದವಿಯವರೆಗೂ ಶಿಕ್ಷಣವನ್ನು ಪಡೆಯಲು ಮೈಸೂರಿಗೆ ತೇರಳಿ ಅಲ್ಲಿನ ಮಹಾರಾಜ ಕಾಲೇಜಿನಲ್ಲಿ ಬಿಎ ಹಾಗೂ ಎಂಎ ಪದವಿಯನ್ನು ಪಡೆದರು.
ವೃತ್ತಿ ಜೀವನ:
ತಮ್ಮ ವೃತ್ತಿ ಜೀವನವನ್ನು ಶಿಕ್ಷಣ ಕ್ಷೇತ್ರದಲ್ಲಿ ಆರಂಭಿಸಿದ ಕುವೆಂಪುರವರು ಮೊದಲು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು ನಂತರ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಕುವೆಂಪುರವರು 1956ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ನೇಮಕಗೊಂಡರು. ಈ ಗೌರವ ಸ್ಥಾನಕ್ಕೇರಿದ ಮೊದಲ ಕನ್ನಡಿಗ ಎನ್ನುವ ಹೆಗ್ಗಳಿಕೆ ಕುವೆಂಪುರವರಿಗೆ ಸಲ್ಲುತ್ತದೆ. ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ ತಮ್ಮ ಕಲ್ಪನೆಯ ಕೂಸಾದ ‘ಮಾನಸ ಗಂಗೋತ್ರಿ‘ಯನ್ನು ಕಟ್ಟಿ ಬೆಳೆಸಿದರು. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕನ್ನಡ ಪುಸ್ತಕವನ್ನು ಬರೆಸಿ ಕನ್ನಡ ಮಾಧ್ಯಮ ತರಗತಿಯನ್ನು ಆರಂಭಿಸಿದರು.
ವೈವಾಹಿಕ ಜೀವನ (Kuvempu Prabandha in Kannada):
ಕುವೆಂಪುರವರು 30 ಏಪ್ರಿಲ್ 1937 ರಲ್ಲಿ ಹೇಮಾವತಿಯನ್ನು ವಿವಾಹವಾದರು. ಈ ದಂಪತಿಗಳಿಗೆ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ ಎಂಬ ಇಬ್ಬರು ಪುತ್ರರು ಹಾಗೂ ಇಂದುಕಲಾ, ತಾರಿಣಿ ಎಂಬ ಎರಡು ಪುತ್ರಿಯರಿದ್ದಾರೆ. ಕುವೆಂಪೂರವರ ಮಗ ಪೂರ್ಣಚಂದ್ರ ತೇಜಸ್ವಿಯವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ.
ಸಾಹಿತ್ಯ ಕೃತಿ (Kuvempu Prabandha in Kannada):
ಕುವೆಂಪುರವರು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಅತ್ಯದ್ಭುತ ಕೃತಿಗಳನ್ನು ರಚಿಸಿದ್ದಾರೆ. ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ ಎನ್ನುವ ಮಹಾಕಾವ್ಯಕ್ಕೆ 1967 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಕುವೆಂಪುರವರಿಗೆ ಸಲ್ಲುತ್ತದೆ.
ಕುವೆಂಪುರವರು ಬರೆದ ‘ಕಾನೂರು ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳು ಕನ್ನಡದ ಅತ್ಯುನ್ನತ ಕಾದಂಬರಿಗಳಾಗಿವೆ. ಕವನ ಸಂಕಲನಗಳಾದ ಕೊಳಲು, ಪಾಂಚಜನ್ಯ, ಪಕ್ಷಿಕಾಶಿ, ನವಿಲು, ಕೋಗಿಲೆ ಮತ್ತು ಸೋವಿಯತ್ ರಷ್ಯಾ, ಚಂದ್ರಮಂಚಕೆ ಬಾ ಚಕೋರಿ, ಇಕ್ಷುಗಂಗೋತ್ರಿ ಹೀಗೆ 30ಕ್ಕೂ ಹೆಚ್ಚು ಕಾವ್ಯ ಕೃತಿಗಳನ್ನು ರಚಿಸಿದ್ದಾರೆ.
ಜಲಗಾರ, ಶೂದ್ರ, ತಪಸ್ವಿ, ಬೆರಳ್ಗೆ ಕೊರಳ್, ರಕ್ತಾಕ್ಷಿ, ಸ್ಮಶಾನ ಕುರುಕ್ಷೇತ್ರಂ, ಯಮನ ಸೋಲು ಹಾಗೂ ಬಿರುಗಾಳಿ ಹೀಗೆ ಅನೇಕ ನಾಟಕಗಳು, ಕುವೆಂಪುರವರ ಜೀವನ ಹಾದಿಯನ್ನು ನೆನಪಿಸುವ ಅವರ ಆತ್ಮಕತೆಯಾದ ‘ನೆನಪಿನ ದೋಣಿಯಲ್ಲಿ’ ಹಾಗೂ ಹಲವಾರು ಕಥಾ ಸಂಕಲನಗಳು, ಜೀವನ ಚರಿತ್ರೆಗಳು, ವಿಮರ್ಶೆ, ಶಿಶು ಸಾಹಿತ್ಯ ಹೀಗೆ ಸಾಹಿತ್ಯ ಲೋಕಕ್ಕೆ ಕುವೆಂಪುರವರು ಅಪಾರ ಕೊಡುಗೆಯನ್ನು ನೀಡಿದ್ದಾರೆ.
ಪ್ರಶಸ್ತಿ ಮತ್ತು ಪುರಸ್ಕಾರಗಳು (Kuvempu Prabandha in Kannada):
ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ,ಪದ್ಮಭೂಷಣ, ಪದ್ಮವಿಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿ ಲಭಿಸಿದೆ. ಅಲ್ಲದೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.
ಕರ್ನಾಟಕ ಸರ್ಕಾರವು ಕುವೆಂಪುರವರಿಗೆ ‘ರಾಷ್ಟ್ರಕವಿ’ ಎನ್ನುವ ಬಿರುದನ್ನೂ ನೀಡಿ ಗೌರವಿಸಿದೆ. ಜೊತೆಗೆ 1957 ರಲ್ಲಿ ಧಾರವಾಡದಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ನಿಧನ:
ಕುವೆಂಪುರವರು ತಮ್ಮ 89 ನೇ ವಯಸ್ಸಿನಲ್ಲಿ 11 ನವೆಂಬರ್ 1994 ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳ್ಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರುಸಲಾಯಿತು. ಅವರ ಅಂತ್ಯಸಂಸ್ಕಾರ ನಡೆದ ಜಾಗವನ್ನು “ಕವಿಶೈಲ” ಎಂದು ಕರೆಯಲಾಗಿದೆ. ಈ ಸ್ಥಳ ಈಗ ಪ್ರಸಿದ್ದವಾದ ಪ್ರವಾಸಿ ಹಾಗೂ ಸಾಂಸ್ಕೃತಿಕ ತಾಣವಾಗಿದೆ.
ಉಪಸಂಹಾರ:
ಕುವೆಂಪುರವರು ಕೇವಲ ಒಬ್ಬ ಮಹಾನ್ ಕವಿಯಲ್ಲ. ಅವರು ಕನ್ನಡ ನಾಡು ಕಂಡ ಸಾಂಸ್ಕೃತಿಕ ಯುಗಪುರುಷ. ಕನ್ನಡ ಸಾಹಿತ್ಯ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡುವುದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಾಗಿಯೂ, ವ್ಯಕ್ತಿತ್ವ ಮತ್ತು ಮಾನವೀಯತೆಯಲ್ಲಿ ಆದರ್ಶ ವ್ಯಕ್ತಿಯಾಗಿಯೂ ಹೆಸರಾಗಿದ್ದಾರೆ.
ಕುವೆಂಪುರವರು “ಜಯ ಭಾರತ ಜನನಿಯ ತನುಜಾತೆ” ಯಂತಹ ಗೀತೆಯ ಮೂಲಕ ಕನ್ನಡಿಗರಲ್ಲಿ ನಾಡಪ್ರೇಮವನ್ನು ಬೆಳೆಸಿದರು. “ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು”, “ಓ ನನ್ನ ಚೇತನ ಆಗು ನೀ ಅನಿಕೇತನ” ಮುಂತಾದ ರಾಷ್ಟ್ರಕವಿ ಕುವೆಂಪುರವರ ಕವಿತೆಗಳು ಕನ್ನಡಿಗರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ.
ಇತರೆ ಪ್ರಶ್ನೋತ್ತರಗಳು (Kuvempu Prabandha in Kannada):
ಕುವೆಂಪು ಅವರ ಜನ್ಮಸ್ಥಳ? – ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆ
ಕುವೆಂಪು ಅವರ ಬಿರುದುಗಳು? – ರಾಷ್ಟ್ರಕವಿ, ಯುಗದ ಕವಿ, ಜಗದ ಕವಿ, ಅಭಿನವ ವಾಲ್ಮೀಕಿ, ಮತ್ತು ವಿಶ್ವಮಾನವ
ಕುವೆಂಪು ಅವರ ಸಾಧನೆಗಳು? – ಯುಗದ ಕವಿ ಜಗದ ಕವಿ’ ಎಂದೇ ಖ್ಯಾತರು. ರಾಷ್ಟ್ರಕವಿ, ವಿಶ್ವಮಾನವ ಸಂದೇಶದ ಹರಿಕಾರ, ಮೈಸೂರು ವಿವಿ ಉಪಕುಲಪತಿ, ಮತ್ತು ‘ಜಯ ಭಾರತ ಜನನಿಯ ತನುಜಾತೆ’ ರಾಜ್ಯಗೀತೆ ರಚನೆಕಾರ, ಇತರೆ ..

