ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,, ಕರ್ನಾಟಕದ ಯುವಶಕ್ತಿಗಳೇ! “ಜಗತ್ತು ವೇಗವಾಗಿ ಓಡುತ್ತಾ ಇದೆ ಅದರ ಜೊತೆ ನಾವು ಓಡದಿದ್ರೆ ಹಿಂದೆ ಉಳಿದು ಬಿಡ್ತೀವಿ ನೆನಪಿನಲ್ಲಿಡಿ”. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಾದಿಯಲ್ಲಿ ಆರ್ಥಿಕ ಹೊರೆ ಕಡಿಮೆಮಾಡಲು ಕರ್ನಾಟಕ ಸರ್ಕಾರ “ಬುಡಕಟ್ಟು ಕಲ್ಯಾಣ ಇಲಾಖೆಯ” ಮೂಲಕ ಮೆಟ್ರಿಕ್ ನಂತರದ (Post-Matric) ವಿದ್ಯಾರ್ಥಿವೇತನ ಸುಮಾರು ವರ್ಷಗಳಿಂದನೇ ನೀಡುತ್ತಿದೆ.
SSP Scholarship in Kannada
ಇದೀಗ 2026 ನೇ ಸಾಲಿನಲ್ಲಿಯೂ ಹಳ್ಳಿಯಲ್ಲಿ ಅಥವಾ ಪಟ್ಟಣಗಳಲ್ಲಿ ವಾಸವಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಬೆಂಬಲವನ್ನ ನೀಡುವ ಪ್ರಮುಖ ಉದ್ದೇಶದಿಂದ ಈ ಬಾರಿಯೂ ಅರ್ಜಿಯನ್ನ ಆರಂಭಿಸಿತ್ತು ಅನೇಕ ವಿದ್ಯಾರ್ಥಿಗಳು ಕೆಲವು ಕಾರಣಾಂತರದಿಂದ ಅರ್ಜಿ ಹಾಕದೆ ಇರುವ ಕಾರಣದಿಂದ ವಿದ್ಯಾರ್ಥಿಗಳಿಂಗೆ ಮತ್ತೊಂದು ಅವಕಾಶ ಕೊಡಲು ಮಾರ್ಚ್ 15, 2026 ರ ವರೆಗೆ ದಿನಾಂಕವನ್ನ ವಿಸ್ತರಿಸಿದೆ. ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯದ ಅವಕಾಶಗಳು ನಿಮ್ಮ ಮುಂದೆ ಬಂದು ನಿಂತಿದೆ, ಈಗ ನೀವು ಒಂದೇ ಹೆಜ್ಜೆ ಇಡಬೇಕು ಅಷ್ಟೇ!.
ಕುಟುಂಬದ ಆರ್ಥಿಕ ಅಡೆತಡೆಗಳು ವಿದ್ಯಾರ್ಥಿಗಳ ಶಿಕ್ಷಣದ ದಾರಿಯನ್ನ ತಡೆ ಹಿಡಿಯಬಾರದು. ಈ ವಿದ್ಯಾರ್ಥಿ ವೇತನ ನಿಮ್ಮ ಕಾಲೇಜು ಶುಲ್ಕ, ವಸತಿ ಹಾಗೆ ಪೆನ್ನು ಪುಸ್ತಕಗಳಂತಹ ಇತರೆ ವಿದ್ಯಾಭ್ಯಾಸದ ವೆಚ್ಚಗಳಿಗೆ ಬಲ ನೀಡುತ್ತದೆ. ಇಂತಹ ಅವಕಾಶಗಳು ಮತ್ತೆ ನಿಮಗೆ ಸಿಗದಿರಬಹುದು ಆದ್ದರಿಂದ ತಡೆ ಮಾಡದೆ ಅಗತ್ಯ ಕೆಳಗೆ ಕೊಡಲಾದ ಅಗತ್ಯ ದಾಖಲೆಗಳೊಂದಿಗೆ ಇಂದೇ ಅರ್ಜಿ ಸಲ್ಲಿಸಿ. “ಮತ್ತೆ ಸರ್ಕಾರವು ದಿನಾಂಕವನ್ನು ವಿತರಣೆ ಮಾಡುತ್ತದೆ ಎಂಬ ನಿರೀಕ್ಷಯಲ್ಲಿ ಸುಮ್ಮನೆ ಕೂರಬೇಡಿ”.
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ, ಇವತ್ತಿನ ಒಂದು ಸರಿಯಾದ ನಿರ್ಧಾರ ನಾಳೆಯ ದೊಡ್ಡ ಸಾಧನೆ ಎತ್ತ ನಿನ್ನನ್ನ ಕರೆದೊಯುತ್ತದೆ. ನಿಮ್ಮ ಕನಸಿಗೆ ರೆಕ್ಕೆಯನ್ನು ಕೊಡುವ ಈ ಅವಕಾಶವನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.

ಮುಖ್ಯವಾಗಿ ವಿಸ್ತರಣೆ ಆಗಿರುವ ದಿನಾಂಕದ ವಿವರ :-
SSP ಸ್ಕಾಲರ್ಶಿಪ್ (SSP Scholarship) ಗೆ ಅರ್ಜಿಯು 2025ರ ಕೊನೆಯ ತಿಂಗಳಲ್ಲಿ ಅಥವಾ 2026ರ ಮೊದಲ ತಿಂಗಳಲ್ಲಿ ಆರಂಭವಾಗಿದ್ದು ಇದೀಗ ಬಹಳಷ್ಟು ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸದೆ ಇರುವ ಕಾರಣವನ್ನು ಸರ್ಕಾರ ಗಮನಿಸಿ ಮತ್ತೆ ಅರ್ಜಿ ಸಲ್ಲಿಸುವ ದಿನಾಂಕದ ಅಂತಿಮಗಳು ವಿಸ್ತರಣೆ ಮಾಡಿದೆ ವಿದ್ಯಾರ್ಥಿಗಳು ಎಸ್ ಎಸ್ ಸಿ ಸ್ಕಾಲರ್ಶಿಪ್ ಅರ್ಜಿಯನ್ನು ಸಲ್ಲಿಸಲು 15 ಮಾರ್ಚ್ 2026ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ಸರಿಯಾದ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿ.
State Scholarship Portal (SSP) ಮೇಲೆ ಪ್ರಕಟ ಮಾಹಿತಿ ಪ್ರಕಾರ ಮೆಟ್ರಿಕ್ ನಂತರದ (Post-Matric) ST ವಿಭಾಗದ ವಿದ್ಯಾರ್ಥಿವೇತನ ಅರ್ಜಿಗಳನ್ನು 15 ಮಾರ್ಚ್ 2026ರವರೆಗೆ ಸಲ್ಲಿಸಬಹುದು
ಯಾರು ಅರ್ಹರು? (Eligibility Criteria – ST Post-Matric Scholarship)
ಈ ಸ್ಕಾಲರ್ಶಿಪ್ ಹಣವನ್ನು ಯಾವುದೇ ವಿದ್ಯಾರ್ಥಿಯು ಪಡೆಯಬೇಕೆಂದು ಬಯಸಿದರೆ ಈ ಕೆಳಗಿನ ಅರ್ಹತೆಗಳು ಕಡ್ಡಾಯವಾಗಿ ನಿಮ್ಮಲ್ಲಿ ಇರಲೇಬೇಕೆಂದು ಸರ್ಕಾರ ಹೇಳುತ್ತದೆ. ಹಾಗಿದ್ದರೆ ಯಾವ ಯಾವ ಅರ್ಹತೆಗಳು ನಮ್ಮಲ್ಲಿ ಇರಬೇಕು ? ಎನ್ನುವುದನ್ನ ಈ ಕೆಳಗೆ ನೋಡೋಣ.
- ಅಭ್ಯರ್ಥಿಗಳು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು
- ಅರ್ಜಿದಾರರು ಕರ್ನಾಟಕ ರಾಜ್ಯದ ಮೂಲ ನಿವಾಸಿ (Domicile of Karnataka) ಆಗಿರಬೇಕು.
- ಕನಿಷ್ಠ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.
- PUC, ITI, Diploma, Degree, PG ಅಥವಾ Professional Courseಗಳಲ್ಲಿ Regular mode ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಯಾಗಿರಬೇಕು.
- ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ (Recognized Institution) ದಾಖಲಾತಿ ಮಾಡಿಕೊಂಡಿರಬೇಕು.
- ಕುಟುಂಬದ ವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯನ್ನು (ಸಾಮಾನ್ಯವಾಗಿ ₹2.5 ಲಕ್ಷ ಒಳಗೆ) ಮೀರಿರಬಾರದು.
- ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕು.
- ಒಂದೇ ಸಮಯದಲ್ಲಿ ಮತ್ತೊಂದು ವಿದ್ಯಾರ್ಥಿವೇತನ ಸೌಲಭ್ಯ ಪಡೆಯುತ್ತಿರುವವರಾಗಿರಬಾರದು (No dual scholarship benefit).
SSP Scholarship ನಿಂದ ವಿದ್ಯಾರ್ಥಿಗಳಿಗೆ ಆಗುವ ಅನುಕೂಲ :-
- ಮತ್ತೊಂದು ಅನುಕೂಲವೆಂದರೆ, ವಿದ್ಯಾರ್ಥಿಗಳಿಗೆ ಮಾಸಿಕ ಭತ್ಯೆ (Maintenance Allowance / Monthly Stipend) ನೀಡಲಾಗುತ್ತದೆ, ಇದರಿಂದ ದಿನನಿತ್ಯದ ಆಹಾರ, ಪ್ರಯಾಣ, ಹಾಸ್ಟೆಲ್ ಖರ್ಚುಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಹಳ್ಳಿ ಹಾದಿಯಲ್ಲಿರಲಿ ಅಥವಾ ನಗರದಲ್ಲಿರಲಿ, ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಆರ್ಥಿಕ ಬೆಂಬಲ ದೊರೆಯುತ್ತದೆ.
- ವಿದ್ಯಾರ್ಥಿವೇತನದಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನೆರವಾಗುವ ಮಹತ್ವದ ಅನುಕೂಲಗಳು ಲಭ್ಯವಾಗುತ್ತವೆ. ಮೊದಲನೆಯದಾಗಿ, ಇದು ಕಾಲೇಜು ಶುಲ್ಕ ಹಾಗೂ ಲ್ಯಾಬ್, ಪರೀಕ್ಷಾ ಶುಲ್ಕದಂತಹ ಇತರೆ ವೆಚ್ಚಗಳನ್ನು ಸಂಪೂರ್ಣ ಅಥವಾ ಭಾಗಶಃ ನಿಭಾಯಿಸುತ್ತದೆ.
- ವಿದ್ಯಾರ್ಥಿಗಳು Online Scholarship Portal ಮೂಲಕ ಅರ್ಜಿ ಸಲ್ಲಿಸಲು, ಪ್ರಕ್ರಿಯೆಯನ್ನು ಸುಲಭವಾಗಿ ಮತ್ತು ತ್ವರಿತವಾಗಿ ಮುಗಿಸಬಹುದು. ವಿಶೇಷವಾಗಿ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಗಳು ಲಭ್ಯ, ಆದಾಯ ಮಿತಿಯನ್ನು ಪೂರೈಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವು ನೀಡಲಾಗುತ್ತದೆ.
- ಇದೇ ಭತ್ಯೆ ವಿದ್ಯಾರ್ಥಿಯು ತನ್ನ ಅಧ್ಯಯನಕ್ಕೆ ಸಂಪೂರ್ಣ ಗಮನ ಹರಿಸಲು ಸಹಾಯ ಮಾಡುತ್ತದೆ ಮತ್ತು ಆರ್ಥಿಕ ಕಷ್ಟಗಳಿಂದ ಒತ್ತಡ ತಪ್ಪಿಸುತ್ತದೆ. ಈ ವರ್ಷ ವಿದ್ಯಾರ್ಥಿವೇತನ ಪಡೆದರೆ, ನಿಮ್ಮ ಸಾಧನೆ ಮೇಲೆ ಗಮನ ಇಟ್ಟು, ಮುಂದಿನ ವರ್ಷಗಳ ಯೋಜನೆಗಳಿಗೆ ಸಹ ನೀವು ಅರ್ಹರಾಗಬಹುದು.
ನಾನು ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿದರೆ ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ ?
ಮೇಲೆ ಕೊಡಲಾದ ಹಂತಗಳನ್ನು ತಿಳಿಯುತ್ತ ಬಂದಂತೆ ವಿದ್ಯಾರ್ಥಿಗಳ ಮನಸಲ್ಲಿ ನಾನು ಈ ಯೋಜನೆಗೆ ಅರ್ಹರು ನನಗೆಷ್ಟು ಸ್ಕಾಲರ್ಶಿಪ್ ಮೊತ್ತ ಸಿಗುತ್ತದೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳ ಬಹುದು ಅದನ್ನು ತಿಳಿಯಲು ಈ ಕೆಳಗೆ ನೋಡಿ.
ಪಿಯುಸಿ (PUC) ವಿದ್ಯಾರ್ಥಿಗಳು
- ಮನೆಯಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು (ಡೇ-ಸ್ಕಾಲರ್): ₹2,500
- ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳು: ₹4,000
ವೃತ್ತಿಪರ ಕೋರ್ಸ್ (B.E, B.Tech, MBBS, B.VSc)
- ಮನೆಯಿಂದ ಹೋಗಿ ಪ್ರತಿದಿನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ: ₹7,000
- ಸರ್ಕಾರಿ ಹಾಸ್ಟೆಲ್: ₹13,500
ಇತರೆ ವೃತ್ತಿಪರ ಕೋರ್ಸ್ (Law, Diploma, Nursing)
- ಮನೆಯಿಂದ ಹೋಗಿ ಪ್ರತಿದಿನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ: ₹6,500
- ಸರ್ಕಾರಿ ಹಾಸ್ಟೆಲ್: ₹9,500
ಸಾಮಾನ್ಯ ಪದವಿ (BA, B.Com, BBA, B.Sc, ITI)
- ಮನೆಯಿಂದ ಹೋಗಿ ಪ್ರತಿದಿನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ: ₹3,000
- ಸರ್ಕಾರಿ ಹಾಸ್ಟೆಲ್: ₹6,000
ಎಸ್.ಎಸ್.ಪಿ ಸ್ಕಾಲರ್ಶಿಪ್ ದಿನಾಂಕದ ವಿಸ್ತರಣೆಯಿಂದ ವಿದ್ಯಾರ್ಥಿಗಳಿಗೆ ಏನೆಲ್ಲಾ ಅನುಕೂಲ
- ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ಸಿಗುತ್ತದೆ.
- ದಾಖಲೆ ತಪ್ಪು ಇದ್ದರೆ ಯಾವುದೇ ಅಭ್ಯರ್ಥಿಯಿ ಸರಿಪಡಿಸಲು ಅವಕಾಶ.
- ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗುತ್ತಾರೆ.
- Maintenance Allowance, Stipend ಪಡೆಯಲು ಸುರಕ್ಷತೆ.
- ಆರ್ಥಿಕ ತೊಂದರೆ ಇರುವವರಿಗೆ ಸರ್ಕಾರದಿಂದ ಮತ್ತಷ್ಟು ಸಹಾಯ ಸಿಕ್ಕಂತಾಗುತ್ತದೆ.
- ಹೆಚ್ಚಿನ ಸಮಯದಿಂದ ಅರ್ಜಿ ಪ್ರಕ್ರಿಯೆ ಸುಗಮವಾಗಿ ಮುಗಿಯುತ್ತದೆ, ಅಧ್ಯಯನದ ಮೇಲೆ ಗಮನ ಹರಿಸಲು ಸಾಧ್ಯ ವಾಗುತ್ತದೆ.
ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ನಿಮ್ಮಲ್ಲಿ ಇರಬೇಕು ಗೊತ್ತಾ :
ಸರ್ಕಾರದ ಯಾವುದೇ ಯೋಜನೆಗಳಾಗಿರಲಿ, ವಿದ್ಯಾರ್ಥಿ ವೇತನಗಳಾಗಿರಲಿ ಅರ್ಜಿ ಸಲ್ಲಿಸಲು ಕೆಲವೊಂದು ವ್ಯಯಕ್ತಿಕ ದಾಖಲೆಗಳನ್ನ ಅರ್ಹ ಅಭ್ಯರ್ಥಿಗಳಿಂದ ಕೇಳಲಾಗುತ್ತದೆ. ಅದೇ ರೀತಿ ಅದೇ ರೀತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಗಳು ಎಸ್ ಎಸ್ ಪಿ ಸ್ಕಾಲರ್ಶಿಪ್ ಪಡೆಯಲು ಈ ಕೆಳಗೆ ಕೊಡಲಾದ ಎಲ್ಲಾ ಅಗತ್ಯ ದಾಖಲೆಗಳು ಕಡ್ಡಾಯವಾಗಿ ಇರಬೇಕು.
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ (Caste Certificate – ST)
- ಆದಾಯ ಪ್ರಮಾಣ ಪತ್ರ (Income Certificate)
- SSLC/PUC ಮಾರ್ಕ್ಸ್ ಕಾರ್ಡ್
- ಕಾಲೇಜು ಪ್ರವೇಶ ಪತ್ರ / Bonafide Certificate
- ಬ್ಯಾಂಕ್ ಪಾಸ್ಬುಕ್ (Aadhaar linked)
- ಮೊಬೈಲ್ ನಂಬರ್ (OTPಗಾಗಿ)
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :-
ಆತ್ಮೀಯ ವಿದ್ಯಾರ್ಥಿಗಳೇ ನೀವು ಆನ್ಲೈನ್ ಮೂಲಕ ಈ SSP ವಿದ್ಯಾರ್ಥಿ ವೇತನ (SSP Scholarship) ಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮಗೆ ಅರ್ಥ ಆಗುವ ಹಾಗೆ ಅರ್ಜಿ ಸಲ್ಲಿಸುವ ಹಂತಗಳನ್ನ ಸಂಪೂರ್ಣವಾಗಿ ತಿಳಿಸಲಾಗಿದೆ.
- SSP ಅಧಿಕೃತ Portal: sspscholarship.karnataka.gov.in ಭೇಟಿ ನೀಡಿ
- ಮೊದಲ ಬಾರಿ ಅರ್ಜಿ ಹಾಕುತ್ತಿದ್ದರೆ “New Registration” ಆಯ್ಕೆಯನ್ನು ಕ್ಲಿಕ್ ಮಾಡಿ.
- Name, DOB, Aadhaar, Mobile Number ಹಾಕಿ ವಿದ್ಯಾರ್ಥಿ ಮಾಹಿತಿ ನಮೂದಿಸಿ.
- ಖಾತೆ ಸೃಷ್ಟಿಸಿದ ನಂತರ, Registered ID ಮತ್ತು Password ಬಳಸಿ Portalನಲ್ಲಿ ಲಾಗಿನ್ ಆಗಿ.
- ನಂತರ “Post-Matric Scholarship – ST” ಆಯ್ಕೆಯನ್ನು ಆಯ್ಕೆ ಮಾಡಿ.
- ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಗಳಾದ Name, Gender, Date of Birth, Education Details (SSLC, PUC, Degree, Course Name), College Details / Admission Number ಯಲ್ಲವನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಂದರೆ Caste Certificate (ST), Income Certificate, College Bonafide / Admission Certificate, Previous Marks Card, Bank Passbook (Aadhaar linked)
- ಅರ್ಜಿಯನ್ನು ಪರಿಶೀಲಿಸಿ ಮತ್ತು Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನ ಸಲ್ಲಿಸಿ.
- ನಂತರ ಕೊನೆಯಲ್ಲಿ ನಿಮ್ಮ ಅರ್ಜಿಯ ಸ್ಥಿತಿ (Approved / Rejected / Processing) ಪರಿಶೀಲಿಸಬಹುದು.
ನನ್ನ ಕೊನೆ ಮಾತು :–
“ಅವಕಾಶವನ್ನು ಕೈ ತಪ್ಪಬೇಡಿ! ಈ ವಿದ್ಯಾರ್ಥಿವೇತನ ನಿಮ್ಮ ಕನಸುಗಳಿಗೆ ಬೆಂಬಲ ನೀಡಲು ಸರ್ಕಾರ ನೀಡಿರುವ ದೊಡ್ಡ ಅವಕಾಶ. ನಿಮ್ಮ ಶೈಕ್ಷಣಿಕ ಹಾದಿಯಲ್ಲಿನ ಆರ್ಥಿಕ ಅಡಚಣೆಗಳು ನಿಮ್ಮ ಓದನ್ನು ನಿಲ್ಲಿಸಬಾರದು. ಇಂದೇ ಅರ್ಜಿ ಹಾಕಿ, ನಿಮ್ಮ ಅವಕಾಶವನ್ನು ಬಳಸಿಕೊಳ್ಳಿ. ನಿಮ್ಮ ಶ್ರಮ ಮತ್ತು ಪ್ರತಿಭೆ ನಿಮಗೆ ಭವಿಷ್ಯವನ್ನು ನೀಡಲಿದೆ. ಭವಿಷ್ಯ ನಿಮ್ಮ ಕೈಯಲ್ಲಿದೆ – ಅದಕ್ಕೆ ರೆಕ್ಕೆ ನೀಡಿ!”
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಪರಿಶಿಷ್ಟ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
SSP ವಿದ್ಯಾರ್ಥಿವೇತನಕ್ಕೆ (SSP Scholarship) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15 ಮಾರ್ಚ್ 2026ರವರೆಗೆ ನಿಗದಿಪಡಿಸಲಾಗಿದೆ.
SSP ವಿದ್ಯಾರ್ಥಿವೇತನ (SSP Scholarship) ಕ್ಕೆ ಅರ್ಜಿ ಸಲ್ಲಿಸಲು ಕುಟುಂಬದ ವಾರ್ಷಿಕ ಆದಾಯದ ಮಿತಿ ₹2.5 ಲಕ್ಷ ಮೀರಿರಬಾರದು.
SSP ವಿದ್ಯಾರ್ಥಿವೇತನ (SSP Scholarship) ದಡಿಯಲ್ಲಿ ವಿದ್ಯಾರ್ಥಿಗಳಿಗೆ ₹2,500 ದಿಂದ ₹13,500 ವರೆಗೆ ಸಹಾಯಧನ ಸಿಗುತ್ತದೆ. ಆದರೆ ಅದು ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿರುತ್ತದೆ.
ಇತರೆ ವಿಷಯಗಳ ಪ್ರಮುಖ ಲಿಂಕುಗಳು:
- ಒನಕೆ ಓಬವ್ವನ ಬಗ್ಗೆ ಮಾಹಿತಿ : Onake Obavva Information in Kannada
- ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ | Kuvempu Prabandha in Kannada
- ಕ್ರಿಸ್ಮಸ್ ಹಬ್ಬದ ಬಗ್ಗೆ ಮಾಹಿತಿ (ಪ್ರಬಂಧ) | Christmas Festival Essay In Kannada
- ಪರಿಸರ ಸಂರಕ್ಷಣೆ ಪ್ರಬಂಧ | Parisara Samrakshane Mahatva Essay In Kannada

