PMMVY: ರೂ.11,000 ಸಹಾಯಧನ! ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಬಂಪರ್ ಗಿಫ್ಟ್!

PMMVY

ನಮಸ್ಕಾರ ಸ್ನೇಹಿತರೆ, ನಿಮ್ಮ ಮನೆಯಲ್ಲಿ ಯಾರಾದರೂ ಗರ್ಭಿಣಿ ಮಹಿಳೆಯರಿದ್ದಾರ? ಅವರು ಗರ್ಭವಸ್ಥೆಯಲ್ಲಿರುವಾಗ ಆರ್ಥಿಕ ಸಮಸ್ಯೆಯಿಂದ ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡಲು ಸಾಧ್ಯವಾಗುತ್ತಿಲ್ಲವೇ? ಅಥವಾ ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಯಿಂದ ಗರ್ಭಿಣಿ ಮಹಿಳೆಯರು ಕೂಡ ಒಂದು ಹೊತ್ತಿನ ಕೂಲಿಗೋಸ್ಕರ ಕೆಲಸಕ್ಕೆ ಹೋಗುತ್ತಿದ್ದಾರ? ಈ ಎಲ್ಲಾ ಸಮಸ್ಯೆಗಳಿಗೆ ಬ್ರೆಕ್ ಹಾಕಲು ಗರ್ಭಿಣಿ ಮಹಿಳೆಯರಿಗೆಂದೇ ಭಾರತ ಸರ್ಕಾರವು ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ.

ಪರಿವಿಡಿ

PMMVY in Kannada

ಭಾರತ ಸರ್ಕಾರವು ಕುಟುಂಬದಲ್ಲಿನ ಬಡತನ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ಮಹಿಳೆಯರು ಪೌಷ್ಠಿಕಾಂಶಯುಕ್ತ ಆಹಾರದ ಕೊರತೆಯಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY) ಯನ್ನು ಜಾರಿಗೊಳಿಸಿದ್ದು, ಈ ಯೋಜನೆಗೆ ಸಾಕಷ್ಟು ಗರ್ಭಿಣಿ ಮಹಿಳೆಯರು ಅರ್ಜಿ ಸಲ್ಲಿಸಿ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY) ಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮೊದಲ ಮಗುವಿನ ಗರ್ಭ ಧರಿಸಿದಾಗ ಒಟ್ಟು ₹5,000 ಸಹಾಯಧನವನ್ನು ಹಾಗೂ ಎರಡನೇ ಮಗುವಿನ ಗರ್ಭ ಧರಿಸಿದಾಗ ₹6,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಮಾತೃವಂದನಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯ ದಾಖಲೆಗಳು ಯಾವುದು? ಯೋಜನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು ಏನು? ಹಾಗೂ ಇನ್ನಿತರ ಮಾಹಿತಿಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಕುರಿತು ಮಾಹಿತಿಗಾಗಿ ಕನ್ನಡರೀಡರ್.ಇನ್ ಗೆ ಭೇಟಿ ನೀಡಿ.

PMMVY
PMMVY

ಯೋಜನೆಯ ಕಿರು ವಿಮರ್ಶೆ:

ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರಭಾರತ ಸರ್ಕಾರ
ಯೋಜನೆಯ ಹೆಸರುಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY)
ಅರ್ಹ ಫಲಾನುಭವಿಗಳುಗರ್ಭಿಣಿ ಮಹಿಳೆಯರು
ಒಟ್ಟು ಸಹಾಯಧನಮೊದಲನೇ ಮಗುವಿಗೆ ₹5,000 ಹಾಗೂ ಎರಡನೇ ಮಗುವಿಗೆ ₹6,000
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಹಾಗೂ ಆಫ್ಲೈನ್
PMMVY

ಏನಿದು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ?

ಪ್ರಧಾನಮಂತ್ರಿ ಮಾತೃವಂದನಾ ಯೋಜನೆ (PMMVY) ಯು ಭಾರತ ಸರ್ಕಾರದ ಮಾತೃತ್ವ ಪ್ರಯೋಜನವನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಡಿಯಲ್ಲಿ ಜಾರಿಗೊಳಿಸಲಾಗಿದೆ.

ಈ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಮೊದಲ ಮಗುವಿನ ಗರ್ಭವಸ್ಥೆಯಲ್ಲಿರುವಾಗ ಎರಡು ಕಂತುಗಳಲ್ಲಿ ಹಣವನ್ನು ನೀಡಲಾಗುತ್ತಿದ್ದು, ಒಟ್ಟು ₹5,000 ಹಾಗೂ ಎರಡನೇ ಮಗು ಹೆಣ್ಣಾಗಿದ್ದರೆ ಮಾತ್ರ ಒಂದೇ ಬಾರಿಗೆ ₹6,000 ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಮಾತೃವಂದನಾ ಯೋಜನೆಯನ್ನು ಜಾರಿಗೊಳಿಸಿರುವುದರ ಉದ್ದೇಶ:

1. ಆರೋಗ್ಯವರ್ಧಕ ಹಾಗೂ ಪೌಷ್ಟಿಕಾಂಶವನ್ನು ಹೆಚ್ಚಿಸುವುದು:

ಮಾತೃವಂದನಾ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಸಹಾಯಧನವನ್ನು ನೀಡುವ ಮೂಲಕ ಅವರು ಗರ್ಭವಾಸ್ಥೆಯಲ್ಲಿರುವಾಗ ಅಗತ್ಯವಾದ ಉತ್ತಮ ಪೌಷ್ಟಿಕಯುಕ್ತ ಆಹಾರವನ್ನು ಸೇವಿಸುವಂತೆ ಮಾಡಿ ಅಪೌಷ್ಟಿಕತೆಯಿಂದ ತಾಯಿ ಹಾಗೂ ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.

2. ವಿಶ್ರಾಂತಿ ಪಡೆಯಲು ಅವಕಾಶ:

ಗರ್ಭಿಣಿ ಮಹಿಳೆಯರು ತಮ್ಮ ಗರ್ಭವಸ್ಥೆಯಲ್ಲೂ ಕೂಡ ತಮ್ಮ ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಯಿಂದಾಗಿ ಕೂಲಿ ಕೆಲಸಕ್ಕೆ ಹೋಗುವ ಅರನಿವಾರ್ಯವಿರುತ್ತದೆ. ಇದು ಗರ್ಭಿಣಿ ಮಹಿಳೆಯರು ಹಾಗೂ ಅವರ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಭಾರತ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ತಮ್ಮ ಗರ್ವವಸ್ಥೆಯಲ್ಲಿ ಹಾಗೂ ಹೆರಿಗೆ ನಂತರ ವಿಶ್ರಾಂತಿಯನ್ನು ಪಡೆಯಲು ಅವಕಾಶ ಕಲ್ಪಿಸುವುದು.

3. ಆರೋಗ್ಯ ಭದ್ರತೆಯನ್ನು ಒದಗಿಸುವುದು:

ಭಾರತ ಸರ್ಕಾರವು ಗರ್ಭಿಣಿ ಮಹಿಳೆಯರಿಗೆ ಮಾತೃ ವಂದನಾ ಯೋಜನೆಯಡಿಯಲ್ಲಿ ಸಹಾಯಧನವನ್ನು ಒದಗಿಸುವ ಮೂಲಕ ತಮ್ಮ ಗರ್ಭವಸ್ಥೆಯಲ್ಲಿ ಅಗತ್ಯವಾದ ಪ್ರಸವಪೂರ್ವ ತಪಾಸಣೆಯನ್ನು ಮಾಡಿಸಲು ಅವಕಾಶ ಕಲ್ಪಿಸಿ ತಾಯಿ ಮತ್ತು ಮಗುವಿನ ಆರೋಗ್ಯದ ಕುರಿತು ಮೇಲ್ವಿಚಾರಣೆ ಮಾಡುವಂತೆ ಪ್ರೇರೇಪಿಸುವುದು.

4. ಹೆಣ್ಣು ಮಗುವಿನ ಜನನಕ್ಕೆ ಉತ್ತೇಜನ ನೀಡುವುದು:

ಭಾರತ ಸರ್ಕಾರವು ಮಾತೃವಂದನಾ ಯೋಜನೆಯಡಿಯಲ್ಲಿ ಎರಡನೇ ಮಗು ಹೆಣ್ಣಾಗಿದ್ದರೆ ₹6,000 ವಿಶೇಷ ಸಹಾಯಧನವನ್ನು ನೀಡುವ ಮೂಲಕ ಹೆಣ್ಣು ಮಗುವಿನ ಜನನಕ್ಕೆ ಉತ್ತೇಜನ ನೀಡುತ್ತದೆ.

ಗರ್ಭಿಣಿ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಸಿಗುವ ಒಟ್ಟು ಸಹಾಯಧನ:

ಗರ್ಭಿಣಿ ಮಹಿಳೆಯರು ಮಾತೃವಂದನಾ ಯೋಜನೆಯಡಿಯಲ್ಲಿ ತಮ್ಮ ಎರಡು ಮಕ್ಕಳ ಗರ್ಭವಾಸ್ಥೆಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಮೊದಲ ಮಗುವಿನ ಗರ್ಭವಾಸ್ಥೆಯಲ್ಲಿರುವ ಮಹಿಳೆಯರು ಒಟ್ಟು ಎರಡು ಕಂತುಗಳ ಮೂಲಕ ಸಹಾಯಧನವನ್ನು ಪಡೆದುಕೊಳ್ಳುತ್ತಾರೆ. ಯಾವ ಯಾವ ಕಂತುಗಳಲ್ಲಿ ಎಷ್ಟೆಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು? ತಮ್ಮ ಗರ್ಭವಸ್ಥೆ ಯಾವ ಹಂತದಲ್ಲಿರುವಾಗ ಹಣಪಡೆಯಲು ಸಾಧ್ಯ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

1. ಮೊದಲ ಮಗುವಿನ ಜನನಕ್ಕೆ ಸಿಗುವ ಒಟ್ಟು ಸಹಾಯಧನ:

ಗರ್ಭಿಣಿ ಮಹಿಳೆಯರು ತಮ್ಮ ಮೊದಲ ಮಗುವಿನ ಜನನಕ್ಕೆ ಒಟ್ಟು ₹5,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದ್ದು, ಈ ಸಹಾಯಧನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಅವುಗಳೆಂದರೆ,

  • ಮೊದಲ ಕಂತು:
    • ಮಹಿಳೆಯು ತಾನು ಗರ್ಭಧರಿಸಿದ 6 ತಿಂಗಳ ಒಳಗೆ ಅಥವಾ ಗರ್ಭಧಾರಣೆಯ ನೋಂದಣಿ ಮಾಡಿಸಿಕೊಂಡು, ಮೊದಲ ಪ್ರಸವಪೂರ್ವ ತಪಾಸಣೆಯನ್ನು ಮಾಡಿಸಿಕೊಂಡರೆ ಮೊದಲ ಕಂತಿನ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ಮೊದಲ ಕಂತಿನಲ್ಲಿ ಗರ್ಭಿಣಿ ಮಹಿಳೆಯು ಒಟ್ಟು ₹3,000 ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಎರಡನೇ ಕಂತು:
    • ಗರ್ಭಿಣಿ ಮಹಿಳೆಯರಿಗೆ ಪ್ರಸವವಾಗಿ ಮಗುವಿನ ಜನನವನ್ನು ನೋಂದಾಯಿಸಿಕೊಂಡು, ಮಗುವಿಗೆ 14 ವಾರಗಳ ಲಸಿಕೆಯನ್ನು ಹಾಕಿಸಿದ ನಂತರ ಎರಡನೇ ಕಂತಿನ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.
    • ಅರ್ಹ ಮಹಿಳೆಯರು ಎರಡನೇ ಕಂತಿನಲ್ಲಿ ಒಟ್ಟು ₹2,000 ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.

2. ಎರಡನೇ ಮಗುವಿನ ಜನನಕ್ಕೆ ಸಿಗುವ ಒಟ್ಟು ಸಹಾಯಧನ:

ಗರ್ಭಿಣಿ ಮಹಿಳೆಯರು ಎರಡನೇ ಮಗುವಿನ ಗರ್ಭವಸ್ಥೆಯಲ್ಲಿ ಯಾವುದೇ ಕಂತುಗಳ ಅಗತ್ಯವಿಲ್ಲದೆ ಒಂದೇ ಬಾರಿಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

  • ಮಗುವಿನ ಜನನವನ್ನು ನೋಂದಾಯಿಸಿಕೊಂಡು, ಮಗುವಿಗೆ 14 ವಾರಗಳ ಲಸಿಕೆಯನ್ನು ಹಾಕಿಸಿದ ನಂತರ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಎರಡನೇ ಮಗುವಿನ ಜನನಕ್ಕೆ ಅರ್ಹ ಮಹಿಳೆಯರು ಒಟ್ಟು ₹6,000 ಸಹಾಯಧನವನ್ನು ಪಡೆಯಲು ಅರ್ಹರಾಗಿರಬೇಕುರುತ್ತಾರೆ.
ಇಲ್ಲಿ ಗಮನಿಸಿ: “ಅರ್ಹ ಫಲಾನುಭವಿಗಳಿಗೆ ಜನಿಸಿದ ಎರಡನೇ ಮಗು ಹೆಣ್ಣಾಗಿದ್ದರೆ ಮಾತ್ರ ₹6,000 ಸಹಾಯಧನವನ್ನು ಪಡೆದುಕೊಳ್ಳಬಹುದು. ಒಂದುವೇಳೆ ಎರಡನೇ ಪ್ರಸವದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರೆ ಈ ಸಹಾಯಧನವನ್ನು ಪಡೆಯಲು ಅರ್ಹತೆ ಪಡೆದಿರುವುದಿಲ್ಲ.”

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

  • ಅರ್ಜಿದಾರರು ಭಾರತದ ನಾಗರೀಕರಾಗಿರಬೇಕು.
  • ಅರ್ಜಿದಾರರು 19 ವರ್ಷ ವಯೋಮಿತಿಯನ್ನು ಹೊಂದಿದ್ದು ಗರ್ಭಿಣಿಯರಾಗಿರಬೇಕು.
  • ಈ ಯೋಜನೆಯು ಮೊದಲ ಜೀವಂತ ಮಗುವಿಗೆ ಮಾತ್ರ ಅನ್ವಯವಾಗಲಿದೆ.
  • ಕುಟುಂಬದ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಮೀರಿರಬಾರದು.
  • BPL ಕಾರ್ಡ್ ಹೊಂದಿರಬೇಕು.

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಆಧಾರ್ ಕಾರ್ಡ್
  • BPL ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಪಾಸ್ ಬುಕ್
  • ಇ-ಶ್ರಮ್ ಕಾರ್ಡ್ ಅಥವಾ ಎಂಜಿ ನರೇಗಾ ಜಾಬ್ ಕಾರ್ಡ್
  • ಮಗುವಿನ ಜನನ ಪ್ರಮಾಣಪತ್ರ
  • ಲಸಿಕೆ ಕಾರ್ಡ್

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ಲಾಭವನ್ನು ಪಡೆದುಕೊಳ್ಳಬೇಕಾದರೆ, ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅವುಗಳ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ.

1. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಅಧಿಕೃತ ಪೋರ್ಟಲ್ https://pmmvy.wcd.gov.in/ ಗೆ ಭೇಟಿ ನೀಡಿ.
  • ಹೊಸ ಬಳಕೆದಾರರಾಗಿದ್ದರೆ, ಯೂಸರ್ ಐಡಿ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
  • ನಂತರ, ಅಲ್ಲಿ ಕೇಳದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ.
  • ನಂತರ ಮೇಲೆ ನೀಡಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

2. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಹ ಫಲಾನುಭವಿಗಳು ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ.
  • ಅಲ್ಲಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ.
  • ನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.
  • ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ.
  • ನಂತರ ಸರ್ಕಾರಿ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಿ.

ಅಂತಿಮ ಮಾತು:

ಭಾರತ ಸರ್ಕಾರವು ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ತಮ್ಮ ಗರ್ಭವಸ್ಥೆಯಲ್ಲಿ ಸೇವನೆ ಮಾಡುವಂತೆ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯವನ್ನು ನೀಡುವ ಮೂಲಕ ತಾಯಿ ಹಾಗೂ ಮಗುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ನೀವೇನಾದರೂ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದರೆ, ಈ ಒಂದು ಯೋಜನೆಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:

ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡುವ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಮಾತೃತ್ವ ಯೋಜನೆಯಾಗಿದೆ.

PMMVY ಯೋಜನೆಯಡಿಯಲ್ಲಿ ಮೊದಲ ಮಗುವಿನ ಜನನಕ್ಕೆ ₹5,000 ಸಹಾಯಧನ ಸಿಗಲಿದೆ.

PMMVY ಯೋಜನೆಯಡಿಯಲ್ಲಿ ಎರಡನೇ ಮಗುವಿನ ಜನನಕ್ಕೆ ₹6,000 ಸಹಾಯಧನ ಸಿಗಲಿದೆ.

ಇಲ್ಲ, ಎರಡನೇ ಮಗು ಹೆಣ್ಣಾಗಿದ್ದರೆ ಮಾತ್ರ ಅರ್ಹ ಫಲಾನುಭವಿಗಳು ₹6,000 ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಹ ಫಲಾನುಭವಿಗಳು PMMVY ಗೆ ಅರ್ಜಿ ಸಲ್ಲಿಸಬೇಕಾದರೆ 19 ವರ್ಷ ವಯೋಮಿತಿಯನ್ನು ಹೊಂದಿರಬೇಕು.


ಇತರೆ ವಿಷಯಗಳ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *