ನಮಸ್ಕಾರ ಸ್ನೇಹಿತರೆ, ನೀವೇನಾದರೂ ಬೀದಿ ಬದಿಯಲ್ಲಿ ವ್ಯಾಪಾರ ಮಾಡಬೇಕೆಂದಿದ್ದೀರಾ? ನಿಮಗೆ ವ್ಯಾಪರವನ್ನು ಪ್ರಾರಂಭಿಸಲು ಬಂಡವಾಳದ ಕೊರತೆ ಆಗುತ್ತಿದೀಯಾ? ಹಾಗಿದ್ದರೆ ನೀವು ವ್ಯಾಪಾರವನ್ನು ಪ್ರಾರಂಭಿಸಲು ನಿಮ್ಮ ನೆರವಿಗೆ ಕೇಂದ್ರ ಸರ್ಕಾರವು ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ.
PMSY in Kannada
ಹೌದು, ಕೇಂದ್ರ ಸರ್ಕಾರವು ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತರುವ ಮೂಲಕ ವ್ಯಾಪಾರ ಪ್ರಾರಂಭಿಸಲು ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸುತ್ತಿದೆ. ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬೇಕಾದರೆ ಯಾವುದೇ ಆಸ್ತಿಯನ್ನು ಅಡಮಾನ ಇಡುವ ಅಗತ್ಯವಿರುವುದಿಲ್ಲ. ಈ ಯೋಜನೆಯಡಿಯಲ್ಲಿ ಎಷ್ಟೆಷ್ಟು ಸಾಲವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
ಬೀದಿ ಬದಿಯಲ್ಲಿ ಹಣ್ಣಿನ ಮಾರಾಟ, ತರಕಾರಿಗಳ ಮಾರಾಟ, ತಿಂಡಿ-ತಿಳಿಸುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತದೆ. ಅರ್ಹ ಅಭ್ಯರ್ಥಿಗಳು ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ, ಹೊಂದಿರಬೇಕಾದ ಅರ್ಹತಾ ಮಾನದಂಡಗಳೇನು? ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗೆ ಅರ್ಜಿ ಸಲ್ಲಿಸಲು ಏನಲ್ಲ ಅಗತ್ಯ ದಾಖಲೆಗಳು ಬೇಕು? ಎನ್ನುವ ಕುರಿತು ಈ ಕೆಳಗಿನ ಹಂತದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಇದೇ ರೀತಿಯ ಇನ್ನಷ್ಟು ಹೊಸ ಹೊಸ ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡರೀಡರ್.ಇನ್ ಗೆ ಭೇಟಿ ನೀಡಿ.

ಯೋಜನೆಯ ಕಿರು ಪರಿಚಯ:
| ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ | ಭಾರತ ಸರ್ಕಾರ |
| ಯೋಜನೆಯ ಹೆಸರು | ಪ್ರಧಾನಮಂತ್ರಿ ಸ್ವನಿಧಿ ಯೋಜನೆ (PMSY) |
| ಅರ್ಹ ಫಲಾನುಭವಿಗಳು | ಬೀದಿ ಬದಿ ವ್ಯಾಪಾರಿಗಳು |
| ಒಟ್ಟು ಸಾಲ ಸೌಲಭ್ಯ | ₹90,000 ದ ವರೆಗೆ |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಹಾಗೂ ಆಫ್ಲೈನ್ ಮೂಲಕ |
ಏನಿದು ಪಿಎಂ ಸ್ವನಿಧಿ ಯೋಜನೆ?
ಪ್ರಧಾನಮಂತ್ರಿ ಸ್ವನಿಧಿ ಯೋಜನೆ (PMSY) ಯು ನರೇಂದ್ರ ಮೋದಿಯವರು 2020 ರಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆಂದೇ ಜಾರಿಗೊಳಿಸಿದ ಕಿರು ಸಾಲ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರವನ್ನು ಮುಂದುವರೆಸಲು ಸರ್ಕಾರಿ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯವನ್ನು ಒದಗಿಸುವ ಮೂಲಕ ಅವರಿಗೆ ಆರ್ಥಿಕ ನೀಡುವ ಉದ್ದೇಶವನ್ನು ಹೊಂದಿದೆ.
ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮೂರು ಹಂತದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಹಿಂದೆ ಅರ್ಜಿ ಫಲಾನುಭವಿಗಳಿಗೆ ಒಟ್ಟು ₹80,000 ದ ವರೆಗೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಆದರೆ, 2026 ನೇ ಸಾಲಿನಲ್ಲಿ ಸಾಲದ ಮಿತಿಯನ್ನು ಹೆಚ್ಚಿಸಿ ಒಟ್ಟು ₹90,000 ದ ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಯೋಜನೆಯ ಉದ್ದೇಶ:
- ಬಂಡವಾಳಕ್ಕೆ ನೆರವು:
- ಆರ್ಥಿಕ ಸಮಸ್ಯೆಯಿಂದ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಿದ ಬೀದಿ ಬದಿ ವ್ಯಾಪಾರಿಗಳಿಗೆ ಪುನಃ ವ್ಯಾಪಾರವನ್ನು ಪ್ರಾರಂಭಿಸಲು ಅಗತ್ಯವಾದ ಬಂಡವಾಳಕ್ಕಾಗಿ ಸರ್ಕಾರಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಒದಗಿಸಿ ಅವರ ವ್ಯಾಪಾರಕ್ಕೆ ಆರ್ಥಿಕ ನೆರವನ್ನು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಡಿಜಿಟಲ್ ವಹಿವಾಟು ನಡೆಸಲು ಅವಕಾಶ:
- ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಗೂಗಲ್ ಪೆ, ಫೋನ್ ಪೆ ಗಳಂತಹ ಡಿಜಿಟಲ್ ಪಾವತಿಯನ್ನು ಬಳಸುವಂತೆ ಪ್ರೇರೇಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ:
- ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರಿ ಬ್ಯಾಂಕುಗಳಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ಕೇವಲ 7% ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುವ ಮೂಲಕ ವ್ಯಾಪಾರಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು.
- ಸಾಲದ ಮಿತಿ ವಿಸ್ತರಣೆ:
- ಈ ಹಿಂದೆ ಅರ್ಹ ಫಲಾನುಭವಿಗಳಿಗೆ ಮೂರು ಹಂತಗಳಲ್ಲಿ ಒಟ್ಟು ₹80,000 ದ ವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಮೊದಲ ಹಂತದಲ್ಲಿ ಸಣ್ಣ ಮೊತ್ತದ ಸಾಲವನ್ನು ಸರಿಯಾದ ಸಮಯದಲ್ಲಿ ಪಾವತಿ ಮಾಡಿದ್ದರೆ, ಅವರಿಗೆ ಹಂತ ಹಂತವಾಗಿ ಒಟ್ಟು ₹90,000 ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಫಲಾನುಭವಿಗಳಿಗಾಗುವ ಅನುಕೂಲಗಳು:
ಪಿಎಂ ಸ್ವನಿಧಿ ಯೋಜನೆ (PMSY) ಯಡಿಯಲ್ಲಿ ಸಿಗುವ ಸಾಲಗಳಿಂದ ಅರ್ಹ ಫಲಾನುಭವಿಗಳಿಗೆ ಸಾಕಷ್ಟು ಅನುಕೂಲಗಳಾಗುತ್ತದೆ.
- ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬೇಕಾದರೆ ಯಾವುದೇ ರೀತಿಯ ಶ್ಯುರಿಟಿ ನೀಡುವ ಅಗತ್ಯವಿಲ್ಲ.
- ಅಭ್ಯರ್ಥಿಗಳು ತಮ್ಮ ವ್ಯಾಪಾರದಲ್ಲಿ ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಂಡರೆ ತಿಂಗಳಿಗೆ ₹100 ರಂತೆ ವರ್ಷಕ್ಕೆ ₹1,200 ಕ್ಯಾಶ್ ಬ್ಯಾಕ್ ಗಳನ್ನು ಪಡೆದುಕೊಳ್ಳಬಹುದು. ಇದು ಬ್ಯಾಂಕ್ ನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ನೆರವಾಗುತ್ತದೆ.
- ನೀವೇನಾದರೂ ಸರಿಯಾದ ಸಮಯಕ್ಕೆ ಸಾಲವನ್ನು ಮರು ಪಾವತಿ ಮಾಡಿದರೆ, ನೀವು ಪಾವತಿ ಮಾಡುವ 7% ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೆ ಕೇಂದ್ರ ಸರ್ಕಾರವು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಮರು ಪಾವತಿ ಮಾಡುವ ಮೂಲಕ ಸಹಾಯಧನವಾಗಿ ನೀಡುತ್ತದೆ.
ಫಲಾನುಭವಿಗಳು ಪಡೆದುಕೊಳ್ಳಬಹುದಾದ ಸಾಲದ ವಿವರ:
ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ಮೂರು ಹಂತಗಳಲ್ಲಿ ಒಟ್ಟು ₹90,000 ದ ವರೆಗೆ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ. ಪ್ರತಿ ಹಂತದಲ್ಲಿ ಎಷ್ಟೆಷ್ಟು ಸಾಲ ಸೌಲಭ್ಯ ಸಿಗುತ್ತದೆ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.
- ಮೊದಲ ಹಂತದಲ್ಲಿ:
ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ ₹15,000 ಸಾಲ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಹಂತದ ಸಾಲವನ್ನು 12 ತಿಂಗಳುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.
- ಎರಡನೇ ಹಂತದಲ್ಲಿ:
ಅರ್ಹ ಫಲಾನುಭವಿಗಳು ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಎರಡನೇ ಹಂತದಲ್ಲಿ ₹25,000 ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಹಂತದ ಸಾಲವನ್ನು 18 ತಿಂಗಳುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಫಲಾನುಭವಿಗಳು ಎರಡನೇ ಹಂತದಲ್ಲಿ ಸಾಲವನ್ನು ಪಡೆದುಕೊಳ್ಳಬೇಕಾದರೆ ಮೊದಲ ಹಂತದ ಸಾಲವನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣವಾಗಿ ಮರುಪಾವತಿ ಮಾಡಿರಬೇಕು.
- ಮೂರನೇ ಹಂತದಲ್ಲಿ:
ಅರ್ಹ ಫಲಾನುಭವಿಗಳು ಮೂರನೇ ಹಂತದಲ್ಲಿ ₹50,000 ಸಾಲವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಈ ಹಂತದ ಸಾಲವನ್ನು 36 ತಿಂಗಳುಗಳಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಫಲಾನುಭವಿಗಳು ಮೂರನೇ ಹಂತದಲ್ಲಿ ಸಾಲವನ್ನು ಪಡೆದುಕೊಳ್ಳಬೇಕಾದರೆ ಎರಡನೇ ಹಂತದಲ್ಲಿ ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣವಾಗಿ ಮರುಪಾವತಿ ಮಾಡಿರಬೇಕು.
ಅರ್ಹತಾ ಮಾನದಂಡಗಳು:
- ಅರ್ಹ ಫಲಾನುಭವಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ಫಲಾನುಭವಿಗಳು ಬೀದಿ ಬದಿ ಹಣ್ಣು, ತರಕಾರಿ, ಬಟ್ಟೆ, ತಿಂಡಿ- ತಿನಿಸುಗಳನ್ನು ಹಾಗೂ ಇತರೆ ಸಣ್ಣ ವಸ್ತುಗಳನ್ನು ಮಾರಾಟ ಮಾಡುತ್ತಿರಬೇಕು.
- ಅಭ್ಯರ್ಥಿಗಳು ನಗರ ಅಥವಾ ಅರೆ ನಗರ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತಿರಬೇಕು.
- ಅಭ್ಯರ್ಥಿಗಳು ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಓಟರ್ ಐಡಿ
- ವ್ಯಾಪಾರ ವಿವರ
- ಬ್ಯಾಂಕ್ ಪಾಸ್ ಬುಕ್
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಫಲಾನುಭವಿಗಳು ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬೇಕಾದರೆ, ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಫಲಾನುಭವಿಗಳು ಪಿಎಂ ಸ್ವನಿಧಿ ಅಧಿಕೃತ ಪೋರ್ಟಲ್ https://www.pmsvanidhi.mohua.gov.in/ ಗೆ ಭೇಟಿ ನೀಡಿ.
- ಮೊಬೈಲ್ ಫೋನ್ ಹಾಗೂ ಒಟಿಪಿ ನಮೂದಿಸಿ ಲಾಗಿನ್ ಆಗಿ.
- ನಂತರ ನೀವು ಯಾವ ವರ್ಗದಲ್ಲಿ ವ್ಯಾಪಾರ ಮಾಡುತ್ತಿರುವಿರಿ ಆ ವರ್ಗವನ್ನು ಆಯ್ಕೆಮಾಡಿಕೊಳ್ಳಿ.
- ನಂತರ ಅಗತ್ಯವಾದ ಎಲ್ಲಾ ವೈಯಕ್ತಿಕ ವಿವರ, ವ್ಯಾಪಾರ ವಿವರ ಹಾಗೂ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
- ನಂತರ ಮೇಲೆ ನೀಡಲಾದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ನೀವು ಸಾಲ ಪಡೆಯಲು ಇಚ್ಛಿಸುವ ಬ್ಯಾಂಕ್ ಖಾತೆಯನ್ನ ಆಯ್ಕೆ ಮಾಡಿ ನಂತರ ಅರ್ಜಿ ಸಲ್ಲಿಸಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ನೀವೇನಾದರೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ, ಸರ್ಕಾರಿ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
- ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಾಲವನ್ನು ಪಡೆಯುವ ಅಪ್ಲಿಕೇಶನ್ ಫಾರಂ ಕೇಳಿ ಪಡೆದುಕೊಳ್ಳಿ.
- ನಂತರ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ವಿವರ, ವ್ಯಾಪಾರ ವಿವರ ಹಾಗೂ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
- ಓಟರ್ ಐಡಿ, ಆಧಾರ್ ಕಾರ್ಡ್, ವ್ಯಾಪಾರ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ವಿವರ ಹಾಗೂ ಇನ್ನಿತರ ಅಗತ್ಯ ವಿವರಗಳನ್ನು ಅಪ್ಲಿಕೇಶನ್ ಫಾರ್ಮ್ ನಲ್ಲಿ ಲಗತ್ತಿಸಿ ಬ್ಯಾಂಕ್ ಅಥವಾ ಸೇವಾ ಕೇಂದ್ರಕ್ಕೆ ಸಲ್ಲಿಸಿ.
ಅಂತಿಮ ತೀರ್ಮಾನ:
ಕೇಂದ್ರ ಸರ್ಕಾರವು ಬೀದಿ ಬದಿ ಹಾಗೂ ಸಣ್ಣ ವ್ಯಾಪಾರಿಗಳಿಗೆ ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡುವ ಮೂಲಕ ಈ ವ್ಯಾಪಾರಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ₹90,000 ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ನಿಮಗೇನಾದರೂ ಸಾಲದ ಅಗತ್ಯವಿದ್ದರೆ ಇಂದೇ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಆರ್ಥಿಕ ನೆರವನ್ನು ಪಡೆದುಕೊಳ್ಳಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸುವ ಕೇಂದ್ರ ಸರ್ಕಾರದ ಕಿರು ಸಾಲ ಯೋಜನೆಯಾಗಿದೆ.
PMSY ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ ಅರ್ಹ ಫಲಾನುಭವಿಗಳಿಗೆ ₹15,000 ಸಾಲ ಸೌಲಭ್ಯ ಸಿಗಲಿದೆ.
PMSY ಯೋಜನೆಯಡಿಯಲ್ಲಿ ಎರಡನೇ ಹಂತದಲ್ಲಿ ಅರ್ಹ ಫಲಾನುಭವಿಗಳಿಗೆ ₹25,000 ಸಾಲ ಸೌಲಭ್ಯ ಸಿಗಲಿದೆ.
PMSY ಯೋಜನೆಯನ್ನು ಜಾರಿ ಗೊಳಿಸಿದ ಸರ್ಕಾರ ಭಾರತ ಸರ್ಕಾರ.
ಅರ್ಹ ಫಲಾನುಭವಿಗಳು ಮೊದಲ ಹಂತದ ಸಾಲವನ್ನು 12 ತಿಂಗಳೊಳಗೆ ಮರುಪಾವತಿ ಮಾಡಬೇಕು.
ಇತರೆ ವಿಷಯಗಳ ಪ್ರಮುಖ ಲಿಂಕುಗಳು:
- KSP: ಪೊಲೀಸ್ ಇಲಾಖೆಯಲ್ಲಿ 8167 ಹುದ್ದೆಗಳ ನೇಮಕಾತಿ! ಯಾವ ಇಲಾಖೆಯಲ್ಲಿಎಷ್ಟೆಷ್ಟು ಹುದ್ದೆಗಳು?
- DHFWS: ರಾಯಚೂರು ಆರೋಗ್ಯ ಇಲಾಖೆ ನೇಮಕಾತಿ! SSLC ಪಾಸ್+ಅರ್ಜಿಶುಲ್ಕ ಇಲ್ಲ
- PMMVY: ರೂ.11,000 ಸಹಾಯಧನ! ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಬಂಪರ್ ಗಿಫ್ಟ್!
- Heavy Rain Places: ಕರ್ನಾಟಕದ ಮಳೆಯ ಶ್ರೇಷ್ಠ ತಾಣಗಳು ಮತ್ತು ಪ್ರಕೃತಿ ವೈವಿಧ್ಯ

