YHS: ರೂ. 5 ಲಕ್ಷದ ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ! 800+ ಶಸ್ತ್ರಚಿಕಿತ್ಸೆ, 1600+ ವೈದ್ಯಕೀಯ ಚಿಕಿತ್ಸೆಗೆ ಅವಕಾಶ!

YHS

ನಮಸ್ಕಾರ ಸ್ನೇಹಿತರೆ, ನಿಮ್ಮ ಕುಟುಂಬದ ಸದಸ್ಯರ ಆಸ್ಪತ್ರೆಯ ಖರ್ಚು ನಿಮಗೆ ತುಂಬಾ ಹೊರೆಯಾಗಿ ಪರಿಣಮಿಸುತ್ತಿದೀಯಾ? ಕೈಮೀರಿ ಹೋಗುತ್ತಿರುವ ಆಸ್ಪತ್ರೆಯ ವೆಚ್ಚವನ್ನು ನೋಡಿ ಕಂಗಾಲಾಗುತ್ತಿದ್ದಿರಾ? ಇನ್ನು ಮುಂದೆ ಈ ವಿಷಯದ ಕುರಿತು ಚಿಂತೆ ಬೇಡ. ಏಕೆಂದರೆ ಕರ್ನಾಟಕ ಸರ್ಕಾರವು ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯ ಭದ್ರತೆಗೆ ಒಂದೊಳ್ಳೆಯ ಯೋಜನೆಯನ್ನು ಜಾರಿಗೊಳಿಸಿದೆ.

ಪರಿವಿಡಿ

YHS in Kannada

ಹೌದು, ಕರ್ನಾಟಕ ಸರ್ಕಾರವು ಸಹಕಾರಿ ಸಂಘದ ಸದಸ್ಯರ ಕುಟುಂಬಗಳ ಆರೋಗ್ಯ ಹಿತದೃಷ್ಟಿಯಿಂದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಸಂಕಷ್ಟಕ್ಕೆ ಸಿಲುಕಿದ ರೈತರ ಕುಟುಂಬಗಳಿಗೆ ಹಾಗೂ ಸಹಕಾರಿ ಸಂಘದ ಸದಸ್ಯರ ಕುಟುಂಬಗಳಿಗೆ ಈ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ನೀಡಲಾಗುತ್ತದೆ. 2026-27 ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ಯೋಜನೆಗೆ ಹೊಸದಾಗಿ ನೋಂದಣಿ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ಮಾರ್ಚ್ 31, 2026 ಕ್ಕೆ ನೋಂದಣಿ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಹಾಗಿದ್ದರೆ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಈ ಯೋಜನೆಯಡಿಯಲ್ಲಿ ಎಷ್ಟು ಸಹಾಯಧನ ಸಿಗಲಿದೆ? ಈ ಯೋಜನೆಗೆ ಹೇಗೆ ನೋಂದಣಿ ಮಾಡಿಸಿಕೊಳ್ಳಬೇಕು? ಈ ಯೋಜನೆಯಿಂದಾಗಿ ಅರ್ಜಿ ಫಲಾನುಭವಿಗಳಿಗಾಗುವ ಪ್ರಯೋಜನಗಳೇನು ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ.

ಇದೇ ರೀತಿ ಜನಸಾಮಾನ್ಯರ ನೆರವಿಗೆಂದೇ ಇರುವ ಇನ್ನಷ್ಟು ಹೊಸ ಹೊಸ ಯೋಜನೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಕನ್ನಡರೀಡರ್.ಇನ್ ಗೆ ಭೇಟಿ ನೀಡಿ.

YHS

ಯೋಜನೆಯ ಅವಲೋಕನ:

ಯೋಜನೆಯ ಹೆಸರುಯಶಸ್ವಿನಿ ಆರೋಗ್ಯ ಯೋಜನೆ (YHS)
ಅರ್ಹ ಫಲಾನುಭವಿಗಳುರೈತರು ಹಾಗೂ ಸಹಕಾರಿ ಸಂಘದ ಸದಸ್ಯರು
ಅರ್ಹ ಫಲಾನುಭವಿಗಳಿಗೆ ಸಿಗುವ ಲಾಭ ₹5,00,000 ವರೆಗೆ ನಗದು ರಹಿತ ಚಿಕಿತ್ಸೆ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್
ನೋಂದಣಿ ಪ್ರಕ್ರಿಯೆ ಕೊನೆಗೊಳ್ಳುವ ದಿನಾಂಕ 31-03-2026

ಏನಿದು ಯಶಸ್ವಿನಿ ಆರೋಗ್ಯ ಯೋಜನೆ?

ಯಶಸ್ವಿನಿ ಆರೋಗ್ಯ ಯೋಜನೆ (YHS) ಯು ಕರ್ನಾಟಕ ಸರ್ಕಾರದ ಅತ್ಯುತ್ತಮ ಸರ್ಕಾರಿ ಆರೋಗ್ಯ ವಿಮಾ ಯೋಜನೆಯಾಗಿದ್ದು, ರೈತರು ಹಾಗೂ ಸಹಕಾರಿ ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರು ಈ ಯೋಜನೆಯಡಿಯಲ್ಲಿ ಕಡಿಮೆ ವಂತಿಕೆಯನ್ನು ಪಾವತಿ ಮಾಡುವ ಮೂಲಕ ಭಾರೀ ಮೊತ್ತದ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಯೋಜನೆಯ ಉದ್ದೇಶ:

1. ನಗದು ರಹಿತ ಸೇವೆ:

ಸಹಕಾರಿ ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರು ಮತ್ತು ರೈತರ ಕುಟುಂಬದವರು ಚಿಕಿತ್ಸೆಯನ್ನು ಪಡೆದುಕೊಳ್ಳುವಾಗ ಯಾವುದೇ ಹಣವನ್ನು ಪಾವತಿ ಮಾಡದೇ ಕೇವಲ ಯಶಸ್ವಿನಿ ಕಾರ್ಡ್ ತೋರಿಸಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಅವಕಾಶ ಕಲ್ಪಿಸುವುದು.

2. ಅಲ್ಪ ವೆಚ್ಚದ ಉತ್ತಮ ಚಿಕಿತ್ಸೆ:

ಕರ್ನಾಟಕ ರಾಜ್ಯದ ರೈತರು ಹಾಗೂ ಸಹಕಾರಿ ಸಂಘದ ಸದಸ್ಯರು ಅತ್ಯಂತ ಕಡಿಮೆ ವಂತಿಕೆಯನ್ನು ಪಾವತಿ ಮಾಡುವ ಮೂಲಕ ₹5,00,000 ಮೌಲ್ಯದ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

3. ಶಸ್ತ್ರಚಿಕಿತ್ಸಾ ಸೇವೆಗೆ ಆದ್ಯತೆ:

ಯಶಸ್ವಿನಿ ಆರೋಗ್ಯ ಯೋಜನೆಯಡಿಯಲ್ಲಿ 800 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಹಾಗೂ ಸಹಕಾರಿ ಸಂಘದ ಸದಸ್ಯರು ಗಂಭೀರ ಕಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವುದು ಅನಿವಾರ್ಯವಾಗಿರುವುದರಿಂದ ಪ್ರತಿಯೊಂದು ಶಾಸ್ತ್ರಚಿಕಿತ್ಸೆಗೂ ಆಗುವ ದುಬಾರಿ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.

4. ಹಣಕಾಸಿನ ಭದ್ರತೆ:

ಯಶಸ್ವಿನಿ ಆರೋಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಭಾರೀ ಮೊತ್ತದ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಹಾಗೂ ಸಹಕಾರಿ ಸಂಘದ ಸದಸ್ಯರು ಆಕಸ್ಮಿಕವಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಬೇರೆಯವರೊಂದಿಗೆ ಸಾಲ – ಸೋಲ ಮಾಡುವುದನ್ನು ತಡೆಗಟ್ಟುವುದು ಹಾಗೂ ಆರೋಗ್ಯ ಭದ್ರತೆಯನ್ನು ಒದಗಿಸುವುದು.

ಅರ್ಹ ಫಲಾನುಭವಿಗಳಿಗೆ ಈ ಯೋಜನೆಯಡಿಯಲ್ಲಿ ಸಿಗುವ ಸೌಲಭ್ಯಗಳು:

  • ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ:

ಯಶಸ್ವಿನಿ ಆರೋಗ್ಯ ಯೋಜನೆ (YHS) ಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗೆಳಲ್ಲಿ ಯಾವುದೇ ಖರ್ಚಿಲ್ಲದೆ ಗರಿಷ್ಟ ₹5 ಲಕ್ಷದ ವರೆಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ.

  • 800 + ಶಸ್ತ್ರಚಿಕಿತ್ಸೆಯ ಅವಕಾಶ:

ಯಶಸ್ವಿನಿ ಆರೋಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ಹೃದಯ ಶಸ್ತ್ರಚಿಕಿತ್ಸೆ, ಗರ್ಭಕೋಶಗಳ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಇನ್ನಿತರ 800 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಯಾವುದೇ ಖರ್ಚಿಲ್ಲದೆ ಮಾಡಿಸಿಕೊಳ್ಳಬಹುದು.

  • 1600 + ವೈದ್ಯಕೀಯ ಚಿಕಿತ್ಸೆಗೆ ಅವಕಾಶ:

ಯಶಸ್ವಿನಿ ಆರೋಗ್ಯ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ 1600 ಕ್ಕೂ ಹೆಚ್ಚು ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಿಂದ ಹಿಡಿದು ಗಂಭೀರ ಕಾಯಿಲೆಗಳಿಗೂ ಕೂಡ ಚಿಕಿತ್ಸೆ ಪಡೆಯುವ ಅವಕಾಶ ಇರುತ್ತದೆ.

  • ಸರ್ವರಿಗೂ ಉಚಿತ ಆರೋಗ್ಯ ಸೇವೆ:

ಯಶಸ್ವಿನಿ ಆರೋಗ್ಯ ಯೋಜನೆಯು ಕೇವಲ ಕರ್ನಾಟಕ ರಾಜ್ಯ ರೈತರಿಗೆ ಹಾಗೂ ಸಹಕಾರಿ ಸಂಘಗಳ ಸದಸ್ಯರಿಗೆ ಮಾತ್ರ ಸೀಮಿತವಲ್ಲದೆ, ಅವರ ಕುಟುಂಬದಲ್ಲಿನ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

  • ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ:

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಈ ಯೋಜನೆಗೆ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ನೋಂದಣಿ ಮಾಡಿಸಿಕೊಳ್ಳಲು ಪಾವತಿ ಮಾಡಬೇಕಾದ ಪ್ರೀಮಿಯಂ ಮೊತ್ತ ಎಷ್ಟು?

ಅರ್ಹ ಫಲಾನುಭವಿಗಳು ಯಶಸ್ವಿನಿ ಆರೋಗ್ಯ ಯೋಜನೆ (YHS) ಯಡಿಯಲ್ಲಿ ಲಭ್ಯವನ್ನು ಪಡೆದುಕೊಳ್ಳಬೇಕಾದರೆ ಈ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಪ್ರೀಮಿಯಂ ಅಮೌಂಟ್ ಅನ್ನು ಪಾವತಿಮಾಡುವುದು ಕಡ್ಡಾಯವಾಗಿದೆ. ಅವುಗಳ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ.

  • ನಗರ ಪ್ರದೇಶದ ಫಲಾನುಭವಿಗಳು: 4 ಸದಸ್ಯರನ್ನೊಳಗೊಂಡ ಕುಟುಂಬಗಳು ಒಂದು ವರ್ಷಕ್ಕೆ ₹1,000 ಪ್ರೀಮಿಯಂ ಅಮೌಂಟ್ ಪಾವತಿ ಮಾಡಬೇಕು.
  • ಗ್ರಾಮೀಣ ಪ್ರದೇಶದ ಫಲಾನುಭವಿಗಳು: 4 ಸದಸ್ಯರನ್ನೊಳಗೊಂಡ ಕುಟುಂಬಗಳು ಒಂದು ವರ್ಷಕ್ಕೆ ₹500 ಪ್ರೀಮಿಯಂ ಅಮೌಂಟ್ ಪಾವತಿ ಮಾಡಬೇಕು.
  • ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳು: ಯಾವುದೇ ಪ್ರೀಮಿಯಂ ಅಮೌಂಟ್ ಪಾವತಿ ಮಾಡುವ ಅಗತ್ಯ ಇರುವುದಿಲ್ಲ.

ಯಶಸ್ವಿನಿ ಆರೋಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಕೃಷಿ ಪತ್ತಿನ ಸಹಕಾರಿ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು, ಮೀನುಗಾರರ ಸಂಘ, ಹಾಲು ಉತ್ಪಾದಕರ ಸಂಘಗಳಂತಹ ಕರ್ನಾಟಕದ ಯಾವುದೇ ಸಹಕಾರಿ ಸಂಘಗಳಲ್ಲಿ ಕನಿಷ್ಠ 3 ತಿಂಗಳ ಸದಸ್ಯತ್ವವನ್ನು ಹೊಂದಿರಬೇಕು.
  • ಯಾವುದೇ ವಯೋಮಿತಿಯ ನಿರ್ಬಂಧಗಳಿಲ್ಲದೆ, ಕುಟುಂಬದಲ್ಲಿರುವ ನವಜಾತ ಶಿಶುವಿನಿಂದ ಹಿಡಿದು ವಯಸ್ಸಾದವರು ಕೂಡ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
  • ಈ ಯೋಜನೆಯು ಕೇವಲ ಗ್ರಾಮೀಣ ಭಾಗದ ರೈತರು ಹಾಗೂ ಸಹಕಾರಿ ಸಂಘದ ಸದಸ್ಯರಿಗೆ ಸೀಮಿತವಾಗಿರದೆ, ನಗರ ಪ್ರದೇಶದವರೂ ಕೂಡ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
  • ನೌಕರರ ಸಹಕಾರಿ ಸಂಘಗಳ ಸದಸ್ಯರು ಈ ಯೋಜನೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಇಲ್ಲಿ ಗಮನಿಸಿ: “ನೀವೇನಾದರೂ ಖಾಸಗಿ ಅಥವಾ ಸರ್ಕಾರಿ ವಲಯಗಳಲ್ಲಿ 30,000 ಕ್ಕೂ ಹೆಚ್ಚು ವೇತನವನ್ನು ಪಡೆಯುತ್ತಿದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.”

ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು:

  • ಸಂಘದ ಸದಸ್ಯರ ಹಾಗೂ ಅವರ ಕುಟುಂಬದವರ ಆಧಾರ್ ಕಾರ್ಡ್
  • ಪಡಿತರ ಚೀಟಿ
  • ಸಹಕಾರಿ ಸಂಘದ ಸದಸ್ಯರ ಸದಸ್ಯತ್ವ ಪ್ರಮಾಣಪತ್ರ
  • ಕುಟುಂಬ ಸದಸ್ಯರ ಇತ್ತೀಚಿತ ಪಾಸ್ಪೋರ್ಟ್ ಅಳತೆಯ ಫೋಟೋ
  • ಜಾತಿ ಪ್ರಮಾಣಪತ್ರ
  • ವಾಸಸ್ಥಳ ಪುರಾವೆ
  • ಹಾಗೂ ಇತರೆ ದಾಖಲೆಗಳು

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಫಲಾನುಭವಿಗಳು ಯಶಸ್ವಿನಿ ಆರೋಗ್ಯ ಯೋಜನೆ (YHS) ಗೆ ಸಹಕಾರಿ ಸಂಘಗಳಿಗೆ ಭೇಟಿ ನೀಡಿ ನೋಂದಣಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

  • ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದರೆ, ಮೊದಲು ನೀವು ಸದಸ್ಯತ್ವ ಹೊಂದಿರುವ ಸಹಕಾರಿ ಸಂಘಕ್ಕೆ ಮೇಲೆ ನೀಡಲಾದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ.
  • ನಂತರ ಸಂಘದ ಸಿಬ್ಬಂದಿಗಳು ನೀವು ನೀಡಿರುವ ಅಗತ್ಯ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಸಹಕಾರ ಸಿಂಧೂ ಅಧಿಕೃತ ಪೋರ್ಟಲ್ ಮೂಲಕ ಅಪ್ಲೋಡ್ ಮಾಡುತ್ತಾರೆ.
  • ನಂತರ ನೀವು ಯಶಸ್ವಿನಿ ಆರೋಗ್ಯ ಯೋಜನೆಗೆ ನೋಂದಣಿ ಮಾಡಿಸಿಕೊಂಡಿರುವುದನ್ನು ಖಚಿತಪಡಿಸಲು ತಾತ್ಕಾಲಿಕ ರಶೀದಿಯನ್ನು ನೀಡುತ್ತಾರೆ. ಅದನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಿ.
  • ಕೆಲವು ದಿನಗಳ ನಂತರ ನೀವು ನಿಮ್ಮ ಸಂಘದಲ್ಲಿಯೇ ಯಶಸ್ವಿನಿ ಆರೋಗ್ಯ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

ಯೋಜನೆಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು:

ಪ್ರಮುಖ ವಿವರಗಳು ಪ್ರಮುಖ ದಿನಾಂಕಗಳು
ನೋಂದಣಿ ಪ್ರಕ್ರಿಯೆ ಆರಂಭಗೊಂಡ ದಿನಾಂಕ 03-.01-2026
ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31-03-2026

ಅಂತಿಮ ತೀರ್ಮಾನ:

ನೀವೇನಾದರೂ ಯಶಸ್ವಿನಿ ಆರೋಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ, ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಿ. ನೀವು APL ಪಡಿತರ ಚೀಟಿಯನ್ನು ಅಥವಾ BPL ಪಡಿತರ ಚೀಟಿಯನ್ನು ಹೊಂದಿದ್ದರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು:

ಯಶಸ್ವಿನಿ ಆರೋಗ್ಯ ಯೋಜನೆ (YHS) ಯು ಕರ್ನಾಟಕ ಸರ್ಕಾರದ ಆರೋಗ್ಯ ವಿಮಾ ಯೋಜನೆಯಾಗಿದ್ದು, ರೈತರಿಗೆ ಹಾಗೂ ಸಹಕಾರಿ ಸಂಘದ ಸದಸ್ಯರಿಗೆ ಭಾರೀ ಮೊತ್ತದ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವ ಯೋಜನೆಯಾಗಿದೆ.

ಯಶಸ್ವಿನಿ ಆರೋಗ್ಯ ಯೋಜನೆಯನ್ನು ಕರ್ನಾಟಕ ಸರ್ಕಾರವು ಜಾರಿಗೊಳಿಸಿದೆ.

ನಗರದ ಪ್ರದೇಶದ ಅರ್ಹ ಫಲಾನುಭವಿಗಳು ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾದರೆ ₹1,000 ಪ್ರೀಮಿಯಂ ಅಮೌಂಟ್ ಪಾವತಿ ಮಾಡಬೇಕು.

ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳು ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾದರೆ ₹500 ಪ್ರೀಮಿಯಂ ಅಮೌಂಟ್ ಪಾವತಿ ಮಾಡಬೇಕು.


ಇತರೆ ಪ್ರಮುಖ ಲಿಂಕುಗಳು:

This entry was posted in Scheme and tagged .

Leave a Reply

Your email address will not be published. Required fields are marked *