2026-27 ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಷಯಗಳು ಹರಿದಾಡುತ್ತಿದೆ. ಕರ್ನಾಟಕದ ಆರ್ಥಿಕ ಇತಿಹಾಸದಲ್ಲಿ ಮಹತ್ವದ ದಾಖಲೆಗಳನ್ನು ಬರೆಯಲು ಸಿದ್ದರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿನ (06-03-2026) ಬಜೆಟ್ ಮಂಡನೆಯಲ್ಲಿ ಯಾವೆಲ್ಲಾ ವಿಷಯಗಳ ಕುರಿತು ಮಂಡನೆ ಮಾಡಲಿದ್ದಾರೆ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಗಳು ನಿಜವಾಗುತ್ತಾ? ಅಥವಾ ಸುಳ್ಳಾಗುತ್ತ? ಎನ್ನುವುದನ್ನು ಇನ್ನು ಕೆಲವೇ ಕ್ಷಣಗಳಲ್ಲಿ ತಿಳಿದುಕೊಳ್ಳಬಹುದಾಗಿದೆ.
Karnataka Budget 2026-27 in Kannada
ಈ ಬಜೆಟ್ ಮಂಡನೆಯೂ ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿ ಮಂಡಿಸುವ 17 ನೇ ಬಜೆಟ್ ಮಂಡನೆಯಾಗಿದ್ದು, ಇಷ್ಟು ವರ್ಷದ ಬಜೆಟ್ ಮಂಡನೆಗಳಿಗಿಂದ ಈ ವರ್ಷದ ಬಜೆಟ್ ಮಂಡನೆಯ ಮೇಲೆ ಜನಸಾಮಾನ್ಯರು ಭಾರೀ ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಜನಸಾಮಾನ್ಯರ ಈ ನಿರೀಕ್ಷೆಗಳು ನಿಜವಾಗುತ್ತ? ಸುಳ್ಳಾಗುತ್ತ? ಎನ್ನುವುದನ್ನು ಇನ್ನೇನು ನೋಡಬೇಕಿದೆ.
ಈ ವರ್ಷದ ಬಜೆಟ್ (Budget) ಮಂಡನೆಯಲ್ಲಿ ಜನಸಾಮಾನ್ಯರು ಏನೆಲ್ಲಾ ನಿರೀಕ್ಷೆ ಮಾಡಿದ್ದಾರೆ? ಈ ವರ್ಷದ ಬಜೆಟ್ ಮಂಡನೆಯಿಂದ ಜನಸಾಮಾನ್ಯರ ಜೇಬಿಗೆ ನೆಮ್ಮದಿ ಸಿಗುತ್ತಾ? ಅಥವಾ ಕತ್ತರಿ ಬೀಳುತ್ತಾ? ಅಥವಾ ಎನ್ನುವುದನ್ನು ಈ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳೋಣ. ಇದೇ ರೀತಿಯ ಇನ್ನಷ್ಟು ಹೊಸ ಹೊಸ ವಿಷಯಗಳ ಕುರಿತು ಮಾಹಿತಿಗಾಗಿ ನಮ್ಮ ವೆಬ್ಸೈಟ್ ಕನ್ನಡರೀಡರ್.ಇನ್ ಗೆ ಭೇಟಿ ನೀಡಿ.

ಹೈಲೈಟ್ಸ್:
| 1. ಸಿದ್ದರಾಮಯ್ಯನವರು ಹಣಕಾಸಿನ ಸಚಿವರಾಗಿ ಮಂಡಿಸುವ 17 ನೇ ಬಜೆಟ್ ಮಂಡನೆಯಾಗಿದೆ. 2. ಸುಮಾರು 4.50 ಲಕ್ಷ ರೂ ಮೌಲ್ಯದ ಬಜೆಟ್ ಮಂಡನೆಯಾಗಿದೆ. 3. ಬಜೆಟ್ ಮಂಡನೆಯಲ್ಲಿ ಇಂದಿರಾ ಕಿಟ್ ನೀಡುವ ಕುರಿತು ಸ್ಪಷ್ಟನೆ ಲಭಿಸಲಿದೆ. |
ಈ ವರ್ಷದ ಬಜೆಟ್ ನಲ್ಲಿ ಮಂಡನೆಯಾಗುವ ವಿಷಯಗಳು:
ಇಂದು, ಅಂದರೆ 06-03-2026 ರಂದು ಕರ್ನಾಟಕ ರಾಜ್ಯ ಬಜೆಟ್ (Budget) ಮಂಡನೆಯಾಗಲಿದ್ದು, ಈ ಕೆಳಗೆ ನೀಡಲಾದ ವಿಷಯಗಳ ಕುರಿತು ಮಂಡನೆ ಆಗಲಿದೆ ಎಂದು ನಿರೀಕ್ಷೆ ಇದೆ.
- ಇಂದಿರಾ ಆಹಾರ ಕಿಟ್ ವಿತರಣೆ ಮಾಡುವ ಸಾಧ್ಯತೆ:
ಈ ಮೊದಲು ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಟ್ಟು 10 ಕೆಜಿ ಅಕ್ಕಿಯನ್ನು BPL ಕಾರ್ಡ್ ದಾರರಿಗೆ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ 10 ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿಯನ್ನು ನೀಡಿ ಉಳಿದಂತೆ ಎಣ್ಣೆ, ಅಕ್ಕಿ, ಉಪ್ಪು, ಸಕ್ಕರೆ, ಹೆಸರುಬೇಳೆ, ತೊಗರಿಬೇಳೆಯಂತಹ ಪೌಷ್ಟಿಕಾಂಶಗಳನ್ನು ಒಳಗೊಂಡ ಇಂದಿರಾ ಕಿಟ್ ಗಳನ್ನು ನೀಡುವ ಕುರಿತು ಇಂದಿನ ಬಜೆಟ್ ಮಂಡನೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ.
- ಗೃಹಲಕ್ಷ್ಮಿಯರಿಗೆ ಸೀರೆ ಭಾಗ್ಯ:
ಸಿದ್ದರಾಮಯ್ಯನವರ ಸರ್ಕಾರವು ತಮ್ಮ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯಾಜನೆಯಡಿಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ₹2,000 ಹಣಕಾಸಿನ ನೆರವನ್ನು ನೀಡುತ್ತಾ ಬಂದಿದೆ. ಅದೇ ರೀತಿ ಇಂದಿನ ಬಜೆಟ್ ಮಂಡನೆಯಲ್ಲಿ ತಿಂಗಳಿಗೆ ₹2,000 ಹಣಕಾಸಿನ ನೆರವನ್ನು ಪಡೆಯುತ್ತಿರುವ ಮಹಿಳೆಯರಿಗೆ ಸೀರೆ ಭಾಗ್ಯ ಯೋಜನೆಯನ್ನು ಘೋಷಣೆ ಮಾಡಿದೆ. ಈ ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರಿಗೆ ಪ್ರತಿ ವರ್ಷಕ್ಕೆ 2 ಸೀರೆಗಳನ್ನು ನೀಡುವ ನಿರೀಕ್ಷೆ ಇದೆ.
- ಯುವನಿಧಿ ಯೋಜನೆಯನ್ನು ವಿಸ್ತರಣೆ ಮಾಡುವ ಸಾಧ್ಯತೆ:
ಈ ಹಿಂದೆ ಯುವನಿಧಿ ಯೋಜನೆಯಡಿಯಲ್ಲಿ ಪದವಿಯನ್ನು ಮುಗಿಸಿ ಉದ್ಯೋಗ ಸಿಗದ ಅಭ್ಯರ್ಥಿಗಳಿಗೆ ತಿಂಗಳಿಗೆ ₹1,500 ರಿಂದ ₹3,000 ದ ವರೆಗೆ ಭತ್ಯೆಯನ್ನು ನೀಡಲಾಗುತ್ತಿತ್ತು. ಆದರೆ ಇಂದಿನ ಬಜೆಟ್ ಮಂಡನೆಯಲ್ಲಿ ಯುವ ನಿಧಿ ಯೋಜನೆಯಡಿಯಲ್ಲಿ ಕೇವಲ ಭತ್ಯೆ ನೀಡುವುದು ಮಾತ್ರವಲ್ಲದೆ, ನಿರುದ್ಯೋಗಿಗಳು ಉದ್ಯೋಗ ಪಡೆಯುವಂತೆ ಮಾಡಲು ಕೌಶಲ್ಯ ತರಬೇತಿ ಹಾಗೂ ತಾಂತ್ರಿಕ ತರಬೇತಿಯನ್ನು ಉಚಿತವಾಗಿ ನೀಡುವ ಸಾಧ್ಯತೆಗಳಿದೆ.
- ಬೆಂಗಳೂರು ಅಭಿವೃದ್ದಿಗೆ ಹೆಚ್ಚು ಒತ್ತು:
ಸಿದ್ದರಾಮಯ್ಯನವರು ಬ್ರಾಂಡ್ ಬೆಂಗಳೂರು ಮಾಡುವ ಉದ್ದೇಶದಿಂದ ಈ ವರ್ಷದ ಬಜೆಟ್ ಮಂಡನೆಯಲ್ಲಿ ಭಾರೀ ಮೊತ್ತದ ಅನುದಾನವನ್ನು ನೀಡುವ ಸಾದ್ಯತೆಗೆಳಿವೆ. ಅಂದರೆ, ಬೆಂಗಳೂರಿನ ನಮ್ಮ ಮೆಟ್ರೋ ಅನ್ನು ಮೂರನೇ ಹಂತದ ಕಾಮಗಾರಿಗೆ ಭಾರೀ ಮೊತ್ತದ ಅನುದಾನವನ್ನು ನೀಡುವ ಸಾಧ್ಯತೆಗಳಿವೆ. ಜೊತೆಗೆ ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆಗಳನ್ನು ನಿವಾರಣೆ ಮಾಡಲು ಟನಲ್ ರಸ್ತೆಯನ್ನು ನಿರ್ಮಾಣ ಮಾಡಲು ಚಾಲನೆ ನೀಡುವ ಸಾಧ್ಯತೆಗಳಿದೆ. ಈ ಟನಲ್ ರಸ್ತೆಯನ್ನು ನಿರ್ಮಾಣ ಮಾಡುವುದಕ್ಕೆ ಅಂದಾಜು ₹12,000 ಕೋಟಿ ವೆಚ್ಚದ ಬೃಹತ್ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯತೆ ಇದೆ.
- ವಸತಿ ವಿತರಣೆಗೆ ಸರಳ ಕ್ರಮ:
ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಲಾದ ವಸತಿ ರಹಿತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಈ ಯೋಜನೆಯಡಿಯಲ್ಲಿ ಉಚಿತವಾಗಿ ಮನೆಯನ್ನು ಪಡೆದುಕೊಳ್ಳಬೇಕಾದರೆ ಸಾಕಷ್ಟು ಕಡೆ ಅಲೆದಾಡಬೇಕಿತ್ತು. ಆದರೆ ಈ ವರ್ಷದ ಬಜೆಟ್ ಮಂಡನೆಯಲ್ಲಿ ವಸತಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸುಲಭವಾಗಿ ಹಾಗೂ ಸರಳವಾಗಿ ಮನೆಯನ್ನು ಹಂಚಿಕೆ ಮಾಡಲು ಮುಂದಾಗಿದೆ.
- ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ:
ಈ ವರ್ಷದ ಬಜೆಟ್ ಮಂಡನೆಯಲ್ಲಿ ಕರ್ನಾಟಕ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಡಲು ಸಿದ್ಧವಾಗಿದೆ. ಅಂದರೆ ಈ ವರ್ಷ ಒಟ್ಟು 56,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 8176 ಹುದ್ದೆಗಳ ನೇಮಕಾತಿಗೆ ಮಾರ್ಚ್ ಮಧ್ಯದ ವಾರದಲ್ಲಿ ಅಥವಾ ಕೊನೆಯ ವಾರದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಗೊಳ್ಳುವ ಸಾಧ್ಯತೆಯೂ ಇದೆ.
- ಕೃಷಿ ಮೇಲ್ದಂಡೆ ಯೋಜನೆಗೆ ಭಾರೀ ಅನುದಾನ:
ಸಿದ್ದರಾಮಯ್ಯನವರು ಇಂದಿನ ಬಜೆಟ್ ಮಂಡನೆಯಲ್ಲಿ ಕರ್ನಾಟಕದ ಆರ್ಥಿಕ ಶಕ್ತಿ ಆಗಿರುವ ಉತ್ತರ ಕನ್ನಡ ಭಾಗದ ಕೃಷಿ ಮೇಲ್ದಂಡೆ ಯೋಜನೆಗೆ ಭಾರೀ ಮೊತ್ತದ ಅನುದಾನವನ್ನು ನೀಡುವ ಸಾಧ್ಯತೆಗಳಿವೆ. ಜೊತೆಗೆ ಎಷ್ಟೋ ಹೆಕ್ಟಾರ್ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
ಈ ವರ್ಷದ ಬಜೆಟ್ ಮಂಡನೆಯಿಂದ ಜನಸಾಮಾನ್ಯರಿಗಾಗುವ ಅನೂಕೂಲ:
- ಸರ್ಕಾರವು ಈ ವರ್ಷದ ಬಜೆಟ್ (Budget) ಮಂಡನೆಯಲ್ಲಿ ಇಂದಿರಾ ಕಿಟ್ ನೀಡುವುದರ ಬಗ್ಗೆ ಘೋಷಣೆ ಮಾಡಿದರೆ ಬಡ ವರ್ಗದವರಿಗೆ ಅಕ್ಕಿಯ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜೀವನ ಮಟ್ಟವನ್ನು ಸುಧಾರಿಸಲು ಅವಕಾಶ ಕಲ್ಪಿಸಲಾಗುತ್ತದೆ.
- ಗೃಹ ಲಕ್ಷಿಯರಿಗೆ ಪ್ರತಿ ತಿಂಗಳು ₹2,000 ಸಹಾಯಧನವನ್ನು ನೀಡುವುದರ ಜೊತೆಗೆ ಪ್ರತಿ ವರ್ಷ 2 ಸೀರೆಗಳನ್ನು ನೀಡುವ ಮೂಲಕ ಅವರ ಆರ್ಥಿಕ ಹೊರೆಯು ಕಡಿಮೆ ಆಗುತ್ತದೆ. ಜೊತೆಗೆ ಸಮಾಜದಲ್ಲಿ ಗೌರವಯುತವಾಗಿ ಜೀವನ ಮಾಡಲು ಸಾಧ್ಯವಾಗುತ್ತದೆ.
- ಯುವ ನಿಧಿ ಯೋಜನೆಯಡಿಯಲ್ಲಿ ಕೇವಲ ಭತ್ಯೆಯನ್ನು ನೀಡದೆ ಕೌಶಲ್ಯ ತರಬೇತಿಯನ್ನು ಉಚಿತವಾಗಿ ನೀಡುವುದರಿಂದ ನಿರುದ್ಯೋಗಿಗಳು ಉದ್ಯೋಗ ಪಡೆದುಕೊಳ್ಳಲು ಯಾವುದೇ ಹಿಂಜರಿಕೆ ಮಾಡದೇ ಧೈರ್ಯದಿಂದ ಇಂಟರ್ವ್ಯೂ ಫೇಸ್ ಮಾಡಲು ಸಾಧ್ಯವಾಗುತ್ತದೆ. ಹಾಗೂ ನಿರುದ್ಯೋಗಿಗಳ ಸಂಖ್ಯೆಯು ಕಡಿಮೆ ಆಗುತ್ತದೆ.
- ಕರ್ನಾಟಕ ರಾಜ್ಯ ಬಜೆಟ್ ಮಂಡನೆಯಲ್ಲಿ ಬೆಂಗಳೂರು ನಗರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರಿಂದ, ಅಲ್ಲಿ ವಾಸ ಮಾಡುತ್ತಿರುವ ಜನರು ದಿನನಿತ್ಯ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಅಂತ್ಯವನ್ನು ಹಾಡಬಹುದು ಹಾಗೂ ಅಲ್ಲಿನ ಜನಸಾಮಾನ್ಯರು ಸುಗಮವಾಗಿ ಸಂಚಾರ ಮಾಡಬಹುದು.
- ಈ ಒಂದು ಬಜೆಟ್ ಮಂಡನೆಯಲ್ಲಿ ವಸತಿ ವಿತರಣೆಯನ್ನು ಸುಗಮಗೊಳಿಸುವುದರಿಂದ ಅರ್ಹ ಫಲಾನುಭವಿಗಳು ತಾಂತ್ರಿಕ ಸಮಸ್ಯೆಯಿಂದ ಉಚಿತ ಮನೆಯನ್ನು ಪಡೆಯದೇ ಇರುವುದು, ಮಧ್ಯವರ್ತಿಗಳ ಹಾವಳಿಗಳು ಹಾಗೂ ಇನ್ನಿತರ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಿ ಸುಲಭವಾಗಿ ಮನೆಯನ್ನು ಪಡೆದುಕೊಳ್ಳಬಹುದು.
- ಕರ್ನಾಟಕ ಸರ್ಕಾರವು ಈ ವರ್ಷದ ಬಜೆಟ್ ಮಂಡನೆಯಲ್ಲಿ 56,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವುದರಿಂದ ರಾಜ್ಯದ ಎಷ್ಟೋ ಅಭ್ಯರ್ಥಿಗಳು ಉತ್ತಮ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದರೂ ಕೂಡ ಉದ್ಯೋಗವಿಲ್ಲದೆ ಖಾಲಿ ಕುಳಿತಿದ್ದಾರೆ. ಈ ಒಂದು ನೇಮಕಾತಿ ಇಂದ ಅವರೆಲ್ಲರಿಗೂ ಉದ್ಯೋಗಾವಕಾಶವನ್ನು ಕಲ್ಪಿಸಲಾಗಿದೆ.
- ಈ ವರ್ಷದ ಕೃಷಿ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡುವುದರಿಂದ, ಅಲ್ಲಿನ ರೈತರು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬಹುದಾಗಿದೆ, ಕರ್ನಾಟಕದ ಆರ್ಥಿಕತೆಗೂ ಕೂಡ ಹೆಚ್ಚಿನ ಕೊಡುಗೆಯನ್ನು ನೀಡಬಹುದಾಗಿದೆ. ಜೊತೆಗೆ ಗ್ರಾಮೀಣಾಭಿವೃದ್ದಿಗೂ ನೆರವಾಗಬಹುದಾಗಿದೆ.
ಅಂತಿಮ ತೀರ್ಮಾನ:
ಇಂದು ಸಿದ್ದರಾಮಯ್ಯನವರು ಹಣಕಾಸಿನ ಸಚಿವರಾಗಿ 17 ನೇ ಬಜೆಟ್ ಅನ್ನು ಮಂಡನೆ ಮಾಡಲಿದ್ದು, ತಮ್ಮ ಗ್ಯಾರಂಟಿ ಯೋಜನೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯದ ಆರ್ಥಿಕತೆಯ ಬಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಹಾಗೂ ರಾಜ್ಯದ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ ಎನ್ನುವುದನ್ನು ಜನಸಾಮಾನ್ಯರು ನಿರೀಕ್ಷಿಸುತ್ತಿದ್ದಾರೆ. ಜನಸಾಮಾನ್ಯರು ನೀರಿಕ್ಷಿಸಿದ ಈ ಎಲ್ಲಾ ಅಂಶಗಳ ಕುರಿತು ತಮ್ಮ ಬಜೆಟ್ ನಲ್ಲಿ ಮಂಡನೆ ಮಾಡಲಿದ್ದಾರ? ಅಥವಾ ಇಲ್ಲವ? ಎನ್ನುವುದು ಇನ್ನು ಕೆಲವೇ ಕ್ಷಣದಲ್ಲಿ ಸ್ಪಷ್ಟವಾಗಲಿದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
2026-27 ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ (Budget) ಮಂಡನೆಯನ್ನು ಮುಖ್ಯ ಮಂತ್ರಿ ಹಾಗೂ ಹಣಕಾಸಿನ ಸಚಿವರಾದ ಸಿದ್ದರಾಮಯ್ಯನವರು ಮಂಡಿಸಲಿದ್ದಾರೆ.
2026-27 ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ನ ಅಂದಾಜು ಮೊತ್ತ ಸುಮಾರು 4.50 ಲಕ್ಷ ರೂ ಮೌಲ್ಯದ್ದಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವನ್ನು ಹಣಕಾಸಿನ ಸಚಿವರಾಗಿ ಇಂದು 17 ನೇ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ.
ಹೌದು, ಸರ್ಕಾರವು ಈ ವರ್ಷದ ಬಜೆಟ್ ಮಂಡನೆಯಲ್ಲಿ 56,000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸುವ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಸರ್ಕಾರವು ವಿತರಣೆ ಮಾಡುವ ಇಂದಿರಾ ಆಹಾರ ಕಿಟ್ ನಲ್ಲಿ ತೊಗರಿ ಬೇಳೆ, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ ಹಾಗೂ ಹೆಸರು ಬೇಳೆಗಳು ಇರುವ ಸಾಧ್ಯತೆ ಇದೆ.
ಇತರೆ ವಿಷಯಗಳ ಪ್ರಮುಖ ಲಿಂಕುಗಳು:
- PMSY: ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಶ್ಯುರಿಟಿ ಇಲ್ಲದೆ ₹90,000 ಸಾಲ ಸೌಲಭ್ಯ!
- PMMVY: ರೂ.11,000 ಸಹಾಯಧನ! ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಬಂಪರ್ ಗಿಫ್ಟ್!
- Heavy Rain Places: ಕರ್ನಾಟಕದ ಮಳೆಯ ಶ್ರೇಷ್ಠ ತಾಣಗಳು ಮತ್ತು ಪ್ರಕೃತಿ ವೈವಿಧ್ಯ
- SSP Scholarship: ಸಮಯ ಯಾರಿಗೂ ಕಾಯಲ್ಲ! ಮಾರ್ಚ್ 15ರ ಒಳಗಡೆ SSP ಸ್ಕಾಲರ್ಶಿಪ್ಗೆ ಅಪ್ಲೈ ಮಾಡಿ.

