Heavy Rain Places: ಕರ್ನಾಟಕದ ಮಳೆಯ ಶ್ರೇಷ್ಠ ತಾಣಗಳು ಮತ್ತು ಪ್ರಕೃತಿ ವೈವಿಧ್ಯ

Heavy Rain Places

“ಸ್ನೇಹಿತರೇ” ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಮಳೆ (Heavy Rain Places) ಯಾಗುವ ಪ್ರಮುಖ ಪ್ರದೇಶಗಳು ಯಾವುವು? ಇದಕ್ಕೆ ಕಾರಣವೇನು? ಎಂಬ ಮಾಹಿತಿಯನ್ನು ಒಂದೊದಾಗಿ ತಿಳಿಸಿ ಕೊಡುತ್ತೇನೆ.

ನನ್ನ ಈ ಲೇಖನಿಯಲ್ಲಿ ನಿಮ್ಮಗಾಗಿ ಸಂಪೂರ್ಣ ಮಾಹಿತಿಯನ್ನು ಸಿದ್ಧಪಡಿಸಿದ್ದೇನೆ ಕೊನೆಯವರೆಗೆ ಓದಿ.

Heavy Rain Places In Kannada



ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ (Heavy Rain Places) ಬೀಳುವ ಪ್ರದೇಶವೆಂದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಬರುವ“ಆಗುಂಬೆ” ಯಾಗಿದೆ. ಇದನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯಲಾಗುತ್ತದೆ. ಈ ಕೆಳಗೆ ಒಂದೊದಾಗಿ ಅತಿ ಹೆಚ್ಚಾಗಿ ಮಳೆ ಬೀಳುವ ಪ್ರದೇಶದ ಬಗ್ಗೆ ನೀವು ತಿಳಿಯಬಹುದು.

1.ಆಗುಂಬೆ(Agumbe): ದಕ್ಷಿಣದ ಭಾರತದ ಚಿರಾಪುಂಜಿ:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಆಗುಂಬೆ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ(Heavy Rain Places) ಪಡೆಯುವ ಪ್ರದೇಶವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 800 ಮೀಟರ್ ಎತ್ತರದಲ್ಲಿದೆ ಇದು ದಟ್ಟ ಅರಣ್ಯ ಮತ್ತು ಬೆಟ್ಟಗಳು ಕಣಿವೆಗಳ ನಡುವೆ ನೆಲೆಸಿದೆ. ಅರಬ್ಬಿ ಸಮುದ್ರಕ್ಕೆ ಸಮೀಪವಿರುವುದರಿಂದ ದಕ್ಷಿಣ ಮುಂಗಾರು ಗಾಳಿಗಳು ಹೆಚ್ಚು ಬರುತ್ತವೆ ಬೆಟ್ಟ ಮತ್ತು ಅರಣ್ಯಗಳು ಹೆಚ್ಚಾಗಿ ಕಂಡುಬರುವುದರಿಂದ ಅಲ್ಲಿ ಬೀಸುವ ಗಾಳಿಯನ್ನು ತಡೆದು ಇಲ್ಲಿ ಭಾರಿ ಪ್ರಮಾಣದ ಮಳೆಯಾಗುವಂತೆ ಮಾಡುತ್ತವೆ.

ಈ ಪ್ರದೇಶವು ಸರಾಸರಿ 7,000 ಮೀಮೀ ರಿಂದ 8,000 ಮೀ. ಮೀ ನಷ್ಟು ವಾರ್ಷಿಕ ಮಳೆಯನ್ನೂ ಪಡೆಯುತ್ತವೆ. ಇಷ್ಟೇ ಅಲ್ಲದೆ ಕೇವಲು ವರ್ಷಗಳಲ್ಲಿ ಇದಕ್ಕೂ ಹೆಚ್ಚು ಮಳೆಯಾಗುತ್ತದೆ. ಮುಂಗಾರಿನ ಸಮಯದಲ್ಲಿ ನಿರಂತರವಾಗಿ ಯಾವಾಗಲು ಮಳೆ ಯಾಗುತ್ತಿರುತ್ತದೆ. ಆದರಿಂದ ಇದು ಅತಿ ಹೆಚ್ಚು ಮಳೆ (Heavy Rain Places) ಬೀಳುವ ಪ್ರದೇಶಗಳಲ್ಲಿ ಒಂದಾಗಿದೆ.

ಇಲ್ಲಿ ಸಾಮಾನ್ಯವಾಗಿ ಯಾವಾಗಲೂ ಎಲ್ಲಾ ಕಾಲದಲ್ಲೂ ತಂಪಾದ ಮತ್ತು ತೇವಯುಕ್ತ ವಾತಾವರಣ ಕಂಡು ಬರುತ್ತದೆ ಅತಿ ಹೆಚ್ಚು ಮಳೆ (Heavy Rain Places) ಬೀಳುವುದರಿಂದ ಮಳೆಗಾಲದಲ್ಲಿ ಚಳಿಗಾಲದಲ್ಲಿ ತಂಪು ವಾತಾವರಣ ಮತ್ತು ಸುಡು ಬೇಸಿಗೆಯಲ್ಲಿಯೂ ಅತಿ ಹೆಚ್ಚು ಉಷ್ಣತೆ ಕಂಡುಬರುವುದಿಲ್ಲ ಎಲ್ಲ ಸಮಯದಲ್ಲೂ ತಂಪಾದ ವಾತಾವರಣ ಕೃಷಿ ಮತ್ತು ಅರಣ್ಯಗಳಿಗೆ ತುಂಬ ಅನುಕೂಲವಾಗುತ್ತದೆ.

ಆಗುಂಬೆಯಲ್ಲಿ ಅನೇಕ ಜಾತಿಯ ಔಷದಿ ಸಸ್ಯಗಳು ಮತ್ತು ಪ್ರಾಣಿಗಳು ಕಂಡುಬರುತ್ತವೆ. ವಿಶೇಷವಾಗಿ ಕಿಂಗ್ ಕೋಬ್ರಾ ಹಾವುಗಳು ಇಲ್ಲಿ ಕಾಣಬಹುದಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಸೂರ್ಯಸ್ತ ದೃಶ್ಯಕ್ಕೆ ಇದು ಪ್ರಸಿದ್ಧವಾಗಿದೆ. ಕರ್ನಾಟಕದ ನೀರಿನ ಸಂಪತ್ತಿಗೆ ಪರಿಸರ ಸಮತೋಲನಕ್ಕೆ ಮತ್ತು ಜೈ ಜೀವ ವೈವಿಧ್ಯತೆಗೆ ಅತ್ಯಾಧುನಿಕ ಪಾತ್ರ ವಹಿಸುತ್ತದೆ. ಇಲ್ಲಿ ಹೆಚ್ಚಿನ ನದಿಗಳು ಕಂಡುಬರುವುದರಿಂದ ಕೃಷಿಗೆ ಸಹಕಾರಿಯಾಗಿದೆ.

2.ಹುಲಿಕಲ್(Hulikal):-

ಹಿಂದೆಲ್ಲ ಆಗುಂಬೆ ಮಾತ್ರ ಅತಿ ಹೆಚ್ಚು ಮಳೆ ಬೀಳುವ(Heavy Rain Places) ಪ್ರದೇಶವಾಗಿತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವು ಇಲಾಖೆಯ ಅಂಕಿ ಅಂಶಗಳ ಪ್ರಕಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಪ್ರದೇಶವು ಆಗುಂಬೆ ಗಿಂತ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಗುರುತಿಸಿಕೊಂಡಿದೆ. ಹುಲಿಕಲ್ ಪಶ್ಚಿಮ ಘಟ್ಟ ಪರ್ವತಗಳ ಮಧ್ಯದಲ್ಲಿ ದಟ್ಟ ಅರಣ್ಯ ಮತ್ತು ಬೆಟ್ಟಗಳಿಂದ ಆವೃತವಾಗಿದೆ. ಸಮುದ್ರ ಮಟ್ಟದಿಂದ ತುಂಬ ಸಮೀಪವಿರುವುದರಿಂದ ಮತ್ತು ಈ ಪ್ರದೇಶದ ಎತ್ತರ ಮತ್ತು ಪರ್ವತಗಳು ಹೊಂದಿರುವುದರಿಂದ ಅಲ್ಲಿ ಬೀಸುವ ಮುಂಗಾರು ಗಾಳಿಗಳನ್ನು ತಡೆದು ಭಾರಿ ಮಳೆಯು ಸುರಿಯುವಂತೆ ಮಾಡುತ್ತವೆ.

ಇಲ್ಲಿ ವರ್ಷಕ್ಕೆ ಸರಾಸರಿ 7,000 ಮಿಲಿ ಮೀಟರ್ ಗಿಂತ ಹೆಚ್ಚು ಮಳೆ (Heavy Rain Places) ಆಗುತ್ತದೆ ಆಗುಂಬೆಯಲ್ಲಿ ಮಳೆಯೂ ಹೆಚ್ಚು ದಿನಗಳ ಕಾಲ ಸಣ್ಣದಾಗಿ ಸುರಿದರೆ ಹುಲಿಕಲ್ ನಲ್ಲಿ ಮಳೆಯ ತೀವ್ರತೆ ಬಹಳ ಜೋರಾಗಿರುತ್ತದೆ ಕಳೆದ 50 ವರ್ಷಗಳ ಹಿಂದಿನ ದಾಖಲೆಯನ್ನು ನೋಡಿದರೆ ಬಹುಪಾಲು ವರ್ಷಗಳಲ್ಲಿ ಹುಲಿಕಲ್ ಪ್ರದೇಶವೇ ಆಗುಂಬೆಗಿಂತ ಹೆಚ್ಚಿನ ಮಳೆಯನ್ನೂ ದಾಖಲಿಸಿದೆ. ಪ್ರಸ್ತತ ಕರ್ನಾಟಕದ ನಂಬರ್ ಒನ್ ಮಳೆ ಬೀಳುವ ಪ್ರದೇಶವಾಗಿ ಹೊರಹೊಮ್ಮಿದೆ.

ತಂಪಾದ ಮತ್ತು ತೇವಯುಕ್ತ ವಾತಾವರಣದಲ್ಲಿ ಹೆಚ್ಚು ಮಳೆ ಚಳಿಗಾಲದಲ್ಲಿ ತಂಪು ಮತ್ತು ಬೇಸಿಗೆಯಲ್ಲಿ ಅತಿ ಹೆಚ್ಚು ಬಿಸಿಲು ಕಾಣಿಸಿಕೊಳ್ಳುವುದಿಲ್ಲ ಇಲ್ಲಿ ದಟ್ಟ ಅರಣ್ಯಗಳು ನದಿಗಳು ಮತ್ತು ದೊಡ್ಡ ದೊಡ್ಡ ಜಲಪಾತಗಳು ಕಂಡುಬರುತ್ತವೆ. ಹುಲಿಕಲ್ ಇತ್ತೀಚಿನ ವರ್ಷಗಳ ಚಾಂಪಿಯನ್ ಕೂಡ ಆಗಿದೆ.

3.ಮುದ್ರಾಡಿ (Mudradi):

ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಇರುವ ಮುದ್ರಾಡಿ ಪಶ್ಚಿಮ ಘಟ್ಟ ಪರ್ವತ ಪ್ರದೇಶದಲ್ಲಿ ಕರ್ನಾಟಕದಲ್ಲಿ ಹೆಚ್ಚು ಮಳೆ ಯಾಗುವ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿದೆ. ಸಾಮನ್ಯವಾಗಿ ನಾವು ಆಗುಂಬೆ ಮತ್ತು ಹುಲಿಕಲ್ ಅನ್ನು ಅತಿ ಹೆಚ್ಚು ಮಳೆಬೀಳುವ ಪ್ರದೇಶವೆಂದು (Heavy Rain Places) ಕರೆಯುತ್ತೇವೆ ಆದರೆ ಕಳೆದ 5-6 ವರ್ಷಗಳ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಗಮನಿಸಿದರೆ ಮುದ್ರಾಡಿ ಕೆಲವು ವರ್ಷಗಳಲ್ಲಿ ಆಗುಂಬೆಗಿಂತಲು ಹೆಚ್ಚಿನ ಮಳೆಯನ್ನು ದಾಖಲಿಸಿದೆ.

ಮುದ್ರಾಡಿಯಲ್ಲಿ ಸಾಮಾನ್ಯವಾಗಿ ತೇವಯುಕ್ತ ತಂಪಾದ ಅವಮಾನ ಕಂಡುಬರುತ್ತವೆ. ಹೆಚ್ಚು ಮಳೆಬೀಳುವ ಕಾರಣದಿಂದಾಗಿ ದಟ್ಟ ಅರಣ್ಯ ದಟ್ಟ ಅರಣ್ಯ ಹಸಿರು ಸಸ್ಯಗಳು ಮತ್ತು ನದಿಗಳು ಕಂಡುಬರುತ್ತವೆ ಹೆಚ್ಚು ಮಳೆಯ ಕಾರಣ ಮುದ್ರಾಡಿಯಲ್ಲಿ ತೆಂಗು ಅಡಿಕೆ ಅಕ್ಕಿ ಮತ್ತು ಇತರೆ ಪ್ರಮುಖ ಬೆಳೆಯನ್ನು ಬೆಳೆಯುತ್ತಾರೆ. ಇದರ ಭೌಗೋಳಿಕ ಸ್ಥಾನ ಪಶ್ಚಿಮಘಟ್ಟದ ಸಮೀಪದ ಮತ್ತು ಮುಂಗಾರು ಗಾಳಿಗಳ ಪರಿಣಾಮದಿಂದಾಗಿ ಹೆಚ್ಚು ಮಳೆಯಾಗುತ್ತವೆ.

4.ನಾಡ್ಪಾಲ್ (Nadpal):

ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಇರುವ ಒಂದು ಪ್ರದೇಶವಾಗಿದೆ. ಇದು ಪಶ್ಚಿಮ ಘಟ್ಟ ಪರ್ವತ ಪ್ರದೇಶದ ಸಮೀಪದಲ್ಲಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಆಗುವ ಪ್ರದೇಶಗಳಲ್ಲಿ ಒಂದಾಗಿದೆ ಕೆಲವರ್ಷಗಳಲ್ಲಿ ಕರ್ನಾಟಕದ ಅತಿ ಹೆಚ್ಚು ಮಳೆ (Heavy Rain Places) ದಾಖಲೆಗಳನ್ನು ಕೂಡ ಇದು ಗುರುತಿಸಿಕೊಂಡಿದೆ. ಪಚ್ಚಿಮ ಘಟ್ಟದ ಬೆಟ್ಟಗಳು ಮತ್ತು ದಟ್ಟ ಅರಣ್ಯಗಳಿಂದ ಅವೃತವಾಗಿದ್ದು ಅರಬ್ಬಿ ಸಮುದ್ರದಿಂದ ಬರುವ ದಕ್ಷಿಣ ಪಶ್ಚಿಮ ಮುಂಗಾರು ಗಾಳಿಗಳು ಮತ್ತು ಪರ್ವತಗಳ ಘರ್ಷಣೆಯಿಂದಾಗಿ ತಂಪಾಗಿ ಬಾರಿ ಮಳೆ ಆಗುತ್ತದೆ.

ಇಲ್ಲಿ ವರ್ಷಕ್ಕೆ ಸರಾಸರಿ ಸುಮಾರು 6,000 ಮೀ ಮೀ ನಿಂದ 8000 ಮೀ ಮೀ ವರೆಗೆ ಮಳೆಯಾಗುತ್ತದೆ ಮುಂಗಾರು ಸಮಯದಲ್ಲಿ ನಿರಂತರವಾಗಿ ಭಾರಿ ಮಳೆ ಆಗುತ್ತದೆ ಕೆಲವು ವರ್ಷಗಳಲ್ಲಿ ಇದು ಆಗುಂಬೆ ಮತ್ತು ಹುಲಿಕಲ್ ಪ್ರದೇಶಗಳಿಗಿಂತಲೂ ಹೆಚ್ಚು ಮಳೆಯ ದಾಖಲೆ ನಿರ್ಮಿಸಿದೆ ಹವಾಮಾನವು ತೇವಯುಕ್ತ ಮತ್ತು ತಂಪಾದ ವಾತಾವರಣ ಕಂಡುಬರುತ್ತದೆ ಮಳೆ ಚಳಿಗಾಲದಲ್ಲಿ ತಂಪು ಬೇಸಿಗೆಯಲ್ಲಿ ನಿಯಮಿತವಾದ ಉಷ್ಣತೆ ಇರುತ್ತದೆ.

ಹೆಚ್ಚು ಮಳೆ ಪರಿಣಾಮದಿಂದಾಗಿ ಇಲ್ಲಿ ದಟ್ಟವಾದ ಅರಣ್ಯ ಮತ್ತು ಹಸಿರು ಸಸ್ಯ ಸಂಪತ್ತು ಜೀವವೈವಿಧ್ಯತೆ ಸಮೃದ್ಧವಾಗಿದೆ ಅನೇಕ ಪಕ್ಷಿಗಳು ಕೀಟಗಳು ಮತ್ತು ಕಾಡು ಪ್ರಾಣಿಗಳು ಇಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹೆಚ್ಚು ಮಳೆಯ ಕಾರಣದಿಂದಾಗಿ ರಾಗಿ ಅಡಿಕೆ ತೆಂಗು ಭತ್ತ ಮತ್ತು ಇತರೆ ಖುಷಿಯ ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ.

5.ಹೆಬ್ರಿ (Hebri):

ಹೆಬ್ರಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿದೆ ಇದು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಹತ್ತಿರ ಇರುವುದರಿಂದ ಮುಂಗಾರು ಗಾಳಿಗಳನ್ನು ಅಡ್ಡ ಗೂಡೆಗಳಂತೆ ತಡೆದು ಅಲ್ಲಿ ಭಾರಿ ಮಳೆ ಆಗುವಂತೆ ಮಾಡುತ್ತದೆ ಪರ್ವತ ಪ್ರದೇಶ ಮತ್ತು ಸಮುದ್ರ ಹತ್ತಿರದಲ್ಲೇ ಇರುವುದರಿಂದ ಮಳೆಯ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ.

ಇಲ್ಲಿ ವರ್ಷಕ್ಕೆ ಸರಿ ಸುಮಾರು 5000 ಮೀ ಮೀ 7000 ಮೀ ಮೀ ವರೆಗೆ ಮಳೆಯಾಗುತ್ತದೆ. ಮುಂಗಾರು ಸಮಯದಲ್ಲಿ ನಿರಂತರವಾಗಿ ಭಾರಿ ಮಳೆ ಆಗುತ್ತದೆ ತಂಪಾದ ಮತ್ತು ತೇವಯುಕ್ತ ಹವಮಾನಗಳು ಇಲ್ಲಿ ನಾವು ಕಾಣಬಹುದಾಗಿದೆ ಮಳೆಗಾಲದಲ್ಲಿ ಹೆಚ್ಚು ಮಳೆ ಚಳಿಗಾಲದಲ್ಲಿ ತಂಪು ಮತ್ತು ಬೇಸಿಗೆಯಲ್ಲಿ ನಿಯಮಿತವಾದ ಉಷ್ಣತೆ ಇಲ್ಲಿ ನೋಡಬಹುದಾಗಿದೆ.

ಹೆಬ್ರಿಯ ಸುತ್ತಮುತ್ತಲು ದಟ್ಟವಾದ ಕಾಡು ಹಸಿರು ಸಸ್ಯ ಸಂಪತ್ತು ಮತ್ತು ನದಿಗಳು ಕಂಡುಬರುತ್ತವೆ ಇಲ್ಲಿ ನೀರಿನ ಸಂಪತ್ತು ಹೆಚ್ಚಾಗಿರುವುದರಿಂದ ಕೃಷಿಗೆ ಪ್ರಧಾನವಾದ ಪ್ರದೇಶವಾಗಿದೆ ಅಡಿಕೆ ತೆಂಗು ರಾಗಿ ಗೋಧಿ ಪ್ರಮುಖ ಬೆಳೆಗಳಾಗಿವೆ. ಅಷ್ಟೇ ಅಲ್ಲದೆ ಪ್ರಮುಖ ಪ್ರವಾಸಿ ತಾಣಗಳು ಸಹ ಇಲ್ಲಿ ನೋಡಬಹುದು. (ಸೀತಾ ನದಿ ಸೋಮೇಶ್ವರ ಅಭಯಾರಣ್ಯ ಜಂಬೂತಿ ಜಲಪಾತ)

6.ಶೃಂಗೇರಿ:

ಶೃಂಗೇರಿಯು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಒಂದು ಅತ್ಯಂತ ಪವಿತ್ರವಾದ ತಾಣವಾಗಿದೆ. ಇದು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ(Heavy Rain Places) ಒಂದಾಗಿ ಹೊರಹಮ್ಮಿದೇ. ಧಾರ್ಮಿಕ ಹಾಗು ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ.

ಇದು ತುಂಗಾ ನದಿಯ ತೀರದಲ್ಲಿದ್ದು ಪಶ್ಚಿಮ ಘಟ್ಟದ ಕಟ್ಟ ಅರಣ್ಯ ಮತ್ತು ಬೆಟ್ಟಗಳಿಂದ ಸುತ್ತುವರೆದಿರುವುದರಿಂದ ಇಲ್ಲಿ ದಕ್ಷಿಣ ಪಶ್ಚಿಮ ಮುಂಗಾರು ಗಾಳಿಗಳು ಭಾರಿ ಮಳೆ ಆಗುವಂತೆ ಮಾಡುತ್ತವೆ ವರ್ಷಕ್ಕೆ ಸರಿ ಸುಮಾರು 5000 ಮೀ ಮೀ ನಿಂದ 7000 ಮೀ ಮೀ ಮೀಟರ್ ವರೆಗೆ ಇಲ್ಲಿ ಹೆಚ್ಚು ಮಳೆ ಆಗುತ್ತದೆ. ಇಲ್ಲಿ ತಂಪಾದ ಮತ್ತು ತೇವಾಯುಕ್ತ ಹವಮಾನ ಕಂಡು ಬರುತ್ತದೆ ಮಳೆಗಾಲದಲ್ಲಿ ಭಾರಿ ಮಳೆ ಆಗುತ್ತದೆ ಬೇಸಿಗೆಯಲ್ಲಿ ನಿಯಮಿತವಾದ ಉಷ್ಣತೆ ಇರುತ್ತದೆ.

ಶೃಂಗೇಯಲ್ಲಿ ಪ್ರಸಿದ್ಧವಾಗಿದ್ದು ಅಂದರೆ ಶೃಂಗೇರಿ ಶಾರದಾ ಪೀಠ ಇದರಿಂದ ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿದೆ ಈ ಪೀಠವನ್ನು ಆದಿ ಶಂಕರಾಚಾರ್ಯರು ಸ್ತಾಪಿಸಿದರು. ಇಲ್ಲಿನ ಪ್ರದಾನ ದೇವತೆ ಶಾರದಾಂಬೆ. ದೇಶದ ಹಲವು ಭಾಗಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ.ಇಲ್ಲಿ ಹೆಚ್ಚು ಮಳೆ ಆಗುವದರಿಂದ ಶೃಂಗೇರಿಯ ಸುತ್ತಮುತ್ತ ದಟ್ಟ ಅರಣ್ಯ ಮತ್ತು ಹಸಿರು ಸಸ್ಯ ಸಂಪತ್ತು ಹೆಚ್ಚಾಗಿದೆ ಇಲ್ಲಿನ ಪ್ರಮುಖ ಬೆಳೆಗಳು ಅಡಿಕೆ ನವಣೆ ಸಜ್ಜೆ ತೆಂಗು ಇತ್ಯಾದಿ.

7.ಮಡಿಕೇರಿ (Madikeri):

ಮಡಕೇರಿಯು ಕೊಡಗು ಜಿಲ್ಲೆಯ ಕೇಂದ್ರ ಸ್ಥಾನವಾಗಿದ್ದು ಇದನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಹತ್ತಿರ ಇರುವುದರಿಂದ ಮುಂಗಾರು ಗಾಳಿಗಳನ್ನು ಅಡ್ಡ ಗೂಡೆಗಳಂತೆ ತಡೆದು ಅಲ್ಲಿ ಭಾರಿ ಮಳೆ ಆಗುವಂತೆ ಮಾಡುತ್ತದೆ ಪರ್ವತ ಪ್ರದೇಶ ಮತ್ತು ಸಮುದ್ರ ಹತ್ತಿರದಲ್ಲೇ ಇರುವುದರಿಂದ ಮಳೆಯ ಪ್ರಮಾಣವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ.

ಮಡಕೇರಿ ಸಮುದ್ರ ಮಟ್ಟದಿಂದ ಸುಮಾರು 1,150 ಮೀಟರ್ ಮೀಟರ್ ಎತ್ತರದಲ್ಲಿದೆ. ಮುಂಗಾರು ಕಾಲದಲ್ಲಿ ಹೆಚ್ಚಿನ ಮಳೆಯಾಗುತ್ತದೆ ಕೊಡಗು ಜಿಲ್ಲೆ, ಕರ್ನಾಟಕದ ಹೆಚ್ಚು ಮಳೆ ಯಾಗುವ ಜಿಲ್ಲೆಗಳಲ್ಲಿ ಒಂದಾಗಿದೆ ಇಲ್ಲಿ ವರ್ಷ ಪೂರ್ತಿ ತಂಪಾದ ಮತ್ತು ತೇವಯುಕ್ತ ಹವಮಾನ ಕಂಡುಬರುತ್ತದೆ. ಬೇಸಿಗೆಯಲ್ಲಿ ನಿಯಮಿತ ಉಷ್ಣತೆ ನೋಡಬಹುದು ಹೆಚ್ಚು ಮಳೆ ಕಾರಣದಿಂದ ಮಡಕೇರಿ ಮತ್ತು ಕೊಡಗು ಪ್ರದೇಶದಲ್ಲಿ ಕಾಫಿ ಇಲ್ಲಿ ಮಳೆಯೂ ಕಾಫಿ ಹೂವು ಬಿಡಲು ಬಹಳ ಸಹಕಾರಿಯಾಗಿದೆ. ಮೆಣಸು ಏಲಕ್ಕಿ ಮತ್ತು ಇತರೆ ಮಸಾಲೆ ಬೆಳೆ ಮಸಾಲೆ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ.

ಮಡಿಕೇರಿ ಕೇವಲ ಒಂದು ಮಳೆಯ ಪ್ರದೇಶ ಮಾತ್ರವಲ್ಲ ಅದು ಕರ್ನಾಟಕದ ಒಂದು ಸಾಂಸ್ಕೃತಿಕ ಮತ್ತು ಪ್ರಾಕೃತಿಕ ರತ್ನ. ಇಲ್ಲಿ ನಾವು ಅನೇಕ ಪ್ರವಾಸಿ ತಾಣಗಳನ್ನು ನೋಡಬಹುದು ಮಡಕೇರಿ ಕೋಟ್, ರಾಜ ಸಿಟ್, ಅಬ್ಬಿ ಜಲಪಾತ ಪ್ರಮುಖ ಪ್ರವಾಸಿ ತಾಣಗಳಾಗಿವೆ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

8.ತಲಕಾವೇರಿ (Talakaveri):

ತಲಕಾವರಿಯು ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟಗಳ ಸಾಲಿನಲ್ಲಿರುವ ಅತ್ಯಂತ ಪವಿತ್ರವಾದ ಪ್ರದೇಶವಾಗಿದೆ ಇದು ದಕ್ಷಿಣ ಭಾರತದ ಜೀವನಾಡಿಯಾದ ಕಾವೇರಿ ನದಿಯ ಉಗಮ ಸ್ಥಾನ ಧಾರ್ಮಿಕ ಹಾಗೂ ಪ್ರಾಕೃತಿಕ ಮಹತ್ವದಿಂದ ಇದು ಪ್ರಸಿದ್ದಿ ಪಡೆದ . ಇದು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿ ಹೊರಹಮ್ಮಿದೇ. ಧಾರ್ಮಿಕ ಹಾಗು ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ.

ತಲಕಾವರಿಯು ಪಶ್ಚಿಮ ಘಟ್ಟಗಳ ಅತಿ ಎತ್ತರದ ಭಾಗದಲ್ಲಿ ರುವುದರಿಂದ ಇದು ಕರ್ನಾಟಕದ ಅತಿ ಹೆಚ್ಚು ಮಳೆ ಬೀಳುವ ಪ್ರಮುಖ ತಾಣಗಳಲ್ಲಿ ಒಂದಾಗಿದೆ ಇಲ್ಲಿ ವಾರ್ಷಿಕ ಸರಾಸರಿ 4,000 ದಿಂದ 5000 ವರೆಗೆ ಮಳೆಯಾಗುತ್ತದೆ. ತಲಕಾವೇರಿ ಕಾವೇರಿ ನದಿಯ ಉಗಮ ಸ್ಥಾನವಾಗಿರುವುದರಿಂದ ಇದು ಪವಿತ್ರ ಸ್ಥಳವಾಗಿದೆ ಇಲ್ಲಿ ಕಾವೇರಿ ಅಮ್ಮನ ದೇವಸ್ಥಾನ ಇರುವುದರಿಂದ ಸಾವಿರಾರು ಭಕ್ತರು ಸಂಖ್ಯೆ ಇಲ್ಲಿಗೆ ಹರಿದು ಬರುತ್ತದೆ

ಹಸಿರು ಸಸ್ಯಗಳು ಮತ್ತು ಅಪರೂಪದ ವನ್ಯಜೀವಿಗಳು ಕಂಡುಬರುತ್ತವೆ ತಲಕಾವೇರಿ ಕರ್ನಾಟಕದ ಪ್ರಮುಖ ನೀರಿನ ಮೂಲವಾಗಿದೆ. ಕಾವೇರಿ ನದಿ ಕಾವೇರಿ ನದಿ ಕೃಷಿ ಮತ್ತು ಜಲಜೀವನಕ್ಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಅಲ್ಲಿನ ಗ್ರಾಮೀಣಭಾಗದ ಜನರು ಜೀವನವೇ ಆ ನದಿ ಎಂದರು ತಪ್ಪಾಗಲಾರದು. ತಲಕಾವೇರಿಯು ಸಮುದ್ರಮಟ್ಟದಿಂದ 1,276 ಮೀಟರ್ ಎತ್ತರದಲ್ಲಿದೆ ಧಾರ್ಮಿಕ ಮಹತ್ವ ಹೊಂದಿರುವ ಪ್ರಮುಖ ಪ್ರದೇಶದಲ್ಲಿ ತಲಕಾವೇರಿ ಒಂದಾಗಿದೆ ಪ್ರಕೃತಿ ಮತ್ತು ಪರಿಸರ ದೃಷ್ಟಿಯಿಂದ ಬಹಳ ಮಹತ್ವದ ಸ್ಥಳವಾಗಿದೆ.

9.ಶಿರಸಿ (Sirsi):

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಲ್ನಾಡಿನ ಹೃದಯ ಭಾಗದಲ್ಲಿರುವ ಒಂದು ಸುಂದರ ನಗರ ಇದು ತನ್ನ ದಟ್ಟವಾದ ಅರಣ್ಯ ಭವ್ಯವಾದ ಜಲಪಾತಗಳು ಮತ್ತು ಪುರಾತನ ದೇವಾಲಯಗಳಿಂದ ಹೆಸರುವಾಸಿಯಾಗಿದೆ. ಇಲ್ಲಿ ಹೆಚ್ಚು ಮಳೆ ಆಗಲು ಕಾರಣವೇನೆಂದರೆ. ಪಶ್ಚಿಮ ಘಟ್ಟದ ಬೆಟ್ಟಗಳು ಮತ್ತು ಅರಣ್ಯಗಳಿಗೆ ಸತ್ತುವರಿದಿದೆ ಅರಬ್ಬಿ ಸಮುದ್ರದಿಂದ ಬರುವ ದಕ್ಷಿಣ ಪಶ್ಚಿಮ ಮುಂಗಾರು ಗಾಳಿಗಳು ಮತ್ತು ಪರ್ವತಗಳ ನಡುವೆ ಘರ್ಷಣೆ ಉಂಟಾಗಿ ಇಲ್ಲಿ ಅತಿ ಹೆಚ್ಚು ಮಳೆ ಸುರಿಯಲು ಸಹಾಯಕವಾಗುತ್ತವೆ.

ಶಿರಸಿಯಲ್ಲಿ ವರ್ಷಕ್ಕೆ ಸರಿ ಸುಮಾರು 3000 ದಿಂದ 4,500 ಮೀಟರ್ ವರೆಗೆ ಮಳೆಯಾಗುತ್ತದೆ. ಇಲ್ಲಿ ತೇವಯುಕ್ತ ಮತ್ತು ತಂಪಾದ ಅವಮಾನ ಕಂಡುಬರುತ್ತದೆ ಮಳೆಗಾಲದಲ್ಲಿ ಭಾರಿ ಮಳೆ ಚಳಿಗಾಲದಲ್ಲಿ ತಂಪು ಮತ್ತು ಬೇಸಿಗೆಯಲ್ಲಿ ನಿಯಮಿತವಾದ ಉಷ್ಣತೆ ಇರುತ್ತದೆ. ಇಲ್ಲಿ ಅತಿ ಹೆಚ್ಚು ಮಳೆ ಆಗುವ ಕಾರಣದಿಂದಾಗಿ ಸಮೃದವಾದ ಹಸಿರು ದಟ್ಟ ಅರಣ್ಯಗಳು ಮತ್ತು ಜಲಪಾತಗಳು ಕಂಡುಬರುತ್ತವೆ.

ಇದು ಜೀವ ವೈವಿಧ್ಯತೆಯ ಪ್ರಮುಖ ಕೇಂದ್ರವಾಗಿದೆ ಅನೇಕ ರೂಪದ ಸಸ್ಯಗಳು ಮತ್ತು ವಿವಿಧ ಜಾತಿಯ ಪ್ರಾಣಿಗಳ ಗುಂಪನ್ನು ನೋಡಬಹುದು ಕೃಷಿಗೆ ಮಹತ್ವದ ಪಾತ್ರವನ್ನು ಇಲ್ಲಿ ನೀಡಲಾಗಿದೆ ಹೆಚ್ಚು ಮಳೆಯ ಪರಿಣಾಮ ಇಲ್ಲಿ ಪ್ರಮುಖ ಬೆಳೆಗಳಾಗಿ ಅಡಿಕೆ ಮೆಣಸು ಬತ್ತ ಬಿದ್ರೆ ಬೆಳಗನ್ನು ಹೆಚ್ಚಾಗಿ ಬೆಳೆಯುತ್ತಾರೆ.

10.ಜೋಗ (Jog Falls):

ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಒಂದು ಪ್ರಸಿದ್ಧವಾದ ಸ್ಥಳವಾಗಿದೆ. ಕರ್ನಾಟಕದ ಪ್ರಮುಖ ಮಳೆ ಬೀಳುವ ಪ್ರದೇಶಗಳ ಪಟ್ಟಿಯಲ್ಲಿ ಜೋಗ ಜಲಪಾತವು ಸೇರಿದೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಹತ್ತಿರ ಇರುವುದರಿಂದ ಮುಂಗಾರು ಗಾಳಿಗಳನ್ನು ಅಡ್ಡ ಗೂಡೆಗಳಂತೆ ತಡೆದು ಅಲ್ಲಿ ಭಾರಿ ಮಳೆ ಆಗುವಂತೆ ಮಾಡುತ್ತದೆ.

ಜೋಗದಲ್ಲಿ ವರ್ಷಕ್ಕೆ ಸರಾಸರಿ 4000 ಮೀ ನಿಂದ 6000 ದವರೆಗೆ ಮಳೆಯಾಗುತ್ತದೆ. ಇಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಅತಿ ಹೆಚ್ಚು ಮಳೆ ಆಗುತ್ತದೆ ಹಾಗೆ ಈ ಸಮಯದಲ್ಲಿ ಶರಾವತಿ ನದಿಯ ಜಲಾಶಯನ ಪ್ರದೇಶಗಳು ತುಂಬಿ ಹರಿಯುವುದರಿಂದ ಜೂಗವು ತನ್ನ ಪೂರ್ಣ ವೈಭವವನ್ನು (ರಾಜ, ರಾಣಿ, ರೋರೋ, ರಾಕೆಟ್) ಪ್ರದರ್ಶಿಸುತ್ತದೆ.

ಜೋಗದ ಸಮೀಪದಲ್ಲಿರುವ ಲಿಂಗನಮಕ್ಕಿ ಆಣೆಕಟ್ಟು ಜಲಾಶಯನ ಪ್ರದೇಶದಲ್ಲಿ ಬೀಳುವ ಮಳೆಯೂ ಜಲಪಾತದ ಹರಿಹನ್ನು ನಿರ್ಧರಿಸುತ್ತದೆ. ಆಣೆಕಟ್ಟು ತುಂಬಿ ಗೆಟ್ ಗಳನ್ನೂ ತೆರೆದಾಗ ಜೋಗದ ಸೊಬಗು ರಮಣೀಯವಾಗಿ ಕಂಗೊಳಿಸುತ್ತದೆ.ಇಲ್ಲಿ ಹೆಚ್ಚು ಮಳೆ (Heavy Rain Places) ಆಗುವ ಕಾರಣದಿಂದಾಗಿ ದಟ್ಟ ವಾದ ಅರಣ್ಯಗಳು ಹಸಿರು ಸಸ್ಯಗಳು ಮತ್ತು ವನ್ಯಜೀವಿಗಳನ್ನು ಕಾಣಬಹುದು ಅತ್ಯಂತ ರೋಮಾಂಚಕ ಪ್ರವಾಸಿ ತಾಣವಾಗಿದೆ ಇದು ಪ್ರವಾಸಿಗರನ್ನು ಆಕಶಿಸುತ್ತದೆ.

ಕೊನೆಯ ಮಾತು :-

ಕರ್ನಾಟಕವು ತನ್ನ ಅರಣ್ಯಗಳು, ಪರ್ವತಗಳು, ನದಿಗಳು ಮತ್ತು ವಿಶಿಷ್ಟ ಹವಾಮಾನದಿಂದ ನೈಸರ್ಗಿಕ ವೈವಿಧ್ಯತೆಯ ಭಂಡಾರವಾಗಿದೆ. ಆಗುಂಬೆ, ಹುಲಿಕಲ್, ಮುದ್ರಾಡಿ, ಮಡಿಕೇರಿ, ತಲಕಾವೇರಿ ಮುಂತಾದ ಸ್ಥಳಗಳು ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾಗಿ ಪ್ರಸಿದ್ಧಿ ಹೊಂದಿವೆ. ಈ ಪ್ರದೇಶಗಳ ಭೌಗೋಳಿಕ ಸ್ಥಾನ, ಪಶ್ಚಿಮ ಘಟ್ಟಗಳ ಉತ್ಕರ್ಷಿತ ಭೂಸ್ವರೂಪ ಮತ್ತು ದಕ್ಷಿಣ ಪಶ್ಚಿಮ ಮುಂಗಾರು ಗಾಳಿಗಳ ಪ್ರಭಾವದಿಂದ ಭಾರಿ ಮಳೆ ಸಂಭವಿಸುತ್ತದೆ.

ಇವು ತೇವಯುಕ್ತ, ತಂಪಾದ ವಾತಾವರಣವನ್ನು ನೀಡುತ್ತವೆ ಮತ್ತು ದಟ್ಟವಾದ ಅರಣ್ಯಗಳು, ನದಿಗಳು, ಜಲಪಾತಗಳು, ಹಾಗೂ ಅನೇಕ ವನ್ಯಜೀವಿಗಳನ್ನು ಬೆಳೆಸುತ್ತವೆ. ಹೆಚ್ಚು ಮಳೆಯ (Heavy Rain Places) ಪರಿಣಾಮದಿಂದ, ಈ ಪ್ರದೇಶಗಳು ಕೃಷಿ, ಪ್ರವಾಸೋದ್ಯಮ ಮತ್ತು ಜೈವಿಕ ವೈವಿಧ್ಯತೆಯ ಕೇಂದ್ರವಾಗಿ ಕರ್ನಾಟಕದ ಪರಿಸರಕ್ಕೆ ಮತ್ತು ಜನರ ಜೀವನಕ್ಕೆ ಅಮೂಲ್ಯ ಸೇವೆ ನೀಡುತ್ತವೆ.

ಕಟ್ಟುನಿಟ್ಟಾಗಿ ಹೇಳುವುದಾದರೆ, ಕರ್ನಾಟಕದ ಮಳೆಯ ಹಬ್ಬದ ಪ್ರದೇಶಗಳು ನೈಸರ್ಗಿಕ ಸೌಂದರ್ಯ, ಕೃಷಿ ಶಕ್ತಿ ಮತ್ತು ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಪ್ರಮುಖ ಕೇಂದ್ರಗಳಾಗಿವೆ. ಕರ್ನಾಟಕದಲ್ಲಿ ಕೆಲವೇ ಪ್ರದೇಶಗಳು ಮಾತ್ರ ನಂಬರ್ ಒನ್ ಸ್ಥಾನದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಾಗಿವೆ.

ಪದೇ ಪದೇ ಕೇಳಲಾದ ಪ್ರಶ್ನೋತ್ತರಗಳು :-

1. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ (Heavy Rain Places) ಸ್ಥಳ ಯಾವುದು?

ಉತ್ತರ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪ್ರದೇಶವು ದಕ್ಷಿಣ ಭಾರತದ ಚಿರಾಪುಂಜಿ ಎಂದು ಪ್ರಸಿದ್ಧವಾಗಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಹುಲಿಕಲ್, ಮುದ್ರಾಡಿ, ಮಡಿಕೇರಿ ಪ್ರದೇಶಗಳೂ ಹೆಚ್ಚಾಗಿ ಮಳೆಯ ದಾಖಲೆ ಹೊಂದಿವೆ.

2. ಹೆಚ್ಚು ಮಳೆಯಾಗುವ ಪ್ರದೇಶಗಳಿಗೆ ಕಾರಣವೇನು?

ಉತ್ತರ: ಪಶ್ಚಿಮ ಘಟ್ಟದ ಪರ್ವತಗಳ ಹತ್ತಿರವಾಗಿರುವ ಭೌಗೋಳಿಕ ಸ್ಥಾನ, ದಕ್ಷಿಣ ಪಶ್ಚಿಮ ಮುಂಗಾರು ಗಾಳಿಗಳ ಪ್ರಭಾವ ಮತ್ತು ದಟ್ಟವಾದ ಅರಣ್ಯವು ಗಾಳಿಯನ್ನು ತಡೆದು ಭಾರಿ ಮಳೆ ಬೀಳಲು ಕಾರಣವಾಗುತ್ತದೆ.

3. ವರ್ಷಕ್ಕೆ ಎಷ್ಟು ಮಳೆ ಆಗುತ್ತದೆ?

ಉತ್ತರ: ಆಗುಂಬೆ, ಹುಲಿಕಲ್, ಮುದ್ರಾಡಿ ಹೀಗೆ ಪ್ರದೇಶಗಳಲ್ಲಿ ವರ್ಷಕ್ಕೆ ಸರಾಸರಿ 6,000 mm ರಿಂದ 8,000 mm ಮಳೆಯಾಗುತ್ತದೆ. ಕೆಲವು ವರ್ಷಗಳಲ್ಲಿ ಇವು 8,000 mmಕ್ಕೂ ಹೆಚ್ಚು ಮಳೆಯನ್ನೂ ದಾಖಲಿಸಬಹುದು.

4. ಹೆಚ್ಚು ಮಳೆಯ ಪರಿಣಾಮ ಏನು?

ಉತ್ತರ: ಹೆಚ್ಚು ಮಳೆಯು ದಟ್ಟವಾದ ಹಸಿರು ಅರಣ್ಯ, ನದಿಗಳು, ಜಲಪಾತಗಳು, ಜೀವ ವೈವಿಧ್ಯತೆಯನ್ನು ಬೆಳೆಸುತ್ತದೆ. ಕೃಷಿ, ಪ್ರವಾಸೋದ್ಯಮ ಮತ್ತು ಜಲ ಸಂಪತ್ತಿಗೂ ಬಹುಮುಖ ಸಹಕಾರ ನೀಡುತ್ತದೆ.

5. ಈ ಪ್ರದೇಶಗಳಲ್ಲಿ ಯಾವ ವೈಶಿಷ್ಟ್ಯಗಳು ಇವೆ?

ಉತ್ತರ: ತೇವಯುಕ್ತ, ತಂಪಾದ ವಾತಾವರಣ, ದಟ್ಟವಾದ ಅರಣ್ಯ, ವನ್ಯಜೀವಿಗಳು, ಔಷಧಿ ಸಸ್ಯಗಳು, ಜಲಪಾತಗಳು, ಪ್ರಸಿದ್ಧ ದೇವಾಲಯಗಳು (ಉದಾಹರಣೆಗೆ ಶೃಂಗೇರಿ ಶಾರದಾ ಪೀಠ, ತಲಕಾವೇರಿ ಕಾವೇರಿ ಉಗಮ) ಇವೆ.

ಇತರೆ ವಿಷಯಗಳ ಪ್ರಮುಖ ಲಿಂಕುಗಳು:

Leave a Reply

Your email address will not be published. Required fields are marked *